ಹುಬ್ಬಳ್ಳಿ: ಗಣೇಶನ ವಿಗ್ರಹವನ್ನು ಈದ್ಗಾ ಮೈದಾನಕ್ಕೆ ತರುವಾಗ ಗಣೇಶೋತ್ಸವದ ಜೊತೆ ವಿಜಯೋತ್ಸವದಂಥ ಸಂಭ್ರಮ!
ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ನಡೆಸಲು ಅನುಮತಿ ನೀಡಬಾರದೆಂದು ಅಂಜುಮನ್ ಕಮಿಟಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಮೈದಾನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸೊತ್ತು ಅಂತ ಹೇಳಿದ ನ್ಯಾಯಾಲಯವು ಮುಸಲ್ಮಾನರು ವರ್ಷದಲ್ಲಿ ಎರಡು ಸಲ ನಮಾಜ್ ಗಾಗಿ ಪಾಲಿಕೆಯ ಅನುಮತಿ ಪಡೆದು ಮೈದಾನ ಬಳಸಬಹುದೆಂದು ಹೇಳಿತ್ತು.
ಹುಬ್ಬಳ್ಳಿ: ಇದು ಗಣೇಶೋತ್ಸವದ ಜೊತೆ ವಿಜಯೋತ್ಸವೂ ಹೌದು. ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನದಲ್ಲಿ (Eidgah Maidan) ಇಂದು ವಿಘ್ನ ನಿವಾರಕ ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಮೊದಲು ಮೂರ್ತಿಯನ್ನು ಮೂರು ಸಾವಿರ ಮಠದಿಂದ (Moorusavir Mutt) ಈದ್ಗಾ ಮೈದಾನಕ್ಕೆ ಭರ್ಜರಿ ಮೆರವಣಿಗೆಯಲ್ಲಿ ತರಲಾಯಿತು. ಮೆರವಣಿಗೆಯಲ್ಲಿ ಸ್ಥಳೀಯ ಶಾಸಕರಾದ ಅರವಿಂದ್ ಬೆಲ್ಲದ್ (Arvind Bellad), ಮಹೇಶ್ ಟೆಂಗಿನಕಾಯಿ (Mahesh Tenginakai) ಮತ್ತು ನೂರಾರು ಹಿಂದೂ ಕಾರ್ಯಕರ್ತರು, ಗಣಪನ ಭಕ್ತ ಮಂಡಳಿಯ ಸದಸ್ಯರು ಭಾಗಿಯಾಗಿದ್ದರು. ಮೆರವಣಿಗೆಯನ್ನು ವಿಜಯೋತ್ಸವ ಅನ್ನಲು ಕಾರಣವಿದೆ. ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ನಡೆಸಲು ಅನುಮತಿ ನೀಡಬಾರದೆಂದು ಅಂಜುಮನ್ ಕಮಿಟಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಮೈದಾನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸೊತ್ತು ಅಂತ ಹೇಳಿದ ನ್ಯಾಯಾಲಯವು ಮುಸಲ್ಮಾನರು ವರ್ಷದಲ್ಲಿ ಎರಡು ಸಲ ನಮಾಜ್ ಗಾಗಿ ಪಾಲಿಕೆಯ ಅನುಮತಿ ಪಡೆದು ಮೈದಾನ ಬಳಸಬಹುದೆಂದು ಹೇಳಿತ್ತು. ಹಾಗಾಗೇ, ಇದು ಗಣೇಶೋತ್ಸವದ ಜೊತೆ ವಿಜಯೋತ್ಸವೂ ಹೌದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ