ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ನ್ಯಾಯಾಲಯ ನೀಡಿದ ತೀರ್ಪು ಸಮಸ್ತ ಹಿಂದೂಗಳಿಗೆ ಸಂದ ಜಯವಾಗಿದೆ: ಅರವಿಂದ್ ಬೆಲ್ಲದ್

ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ನಿರ್ಣಯದ ವಿರುದ್ಧ ಅಂಜುಮನ್ ಕಮಿಟಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಕಮಿಟಿಗೆ ಸಿದ್ದರಾಮಯ್ಯ ಸರ್ಕಾರದ ಕುಮ್ಮಕ್ಕಿತ್ತು. ನ್ಯಾಯಲಯವು, ಈದ್ಗಾ ಮೈದಾನ ಕಮಿಟಿಯ ಸ್ವತ್ತಲ್ಲ ಅದು ಪಾಲಿಕೆಗೆ ಸೇರಿದ ಆಸ್ತಿ, ಕಮಿಟಿ ವರ್ಷಕ್ಕೆ ಎರಡು ಬಾರಿ ಅನುಮತಿ ಪಡೆದು ಪ್ರಾರ್ಥನೆ ಸಲ್ಲಿಸಬಹುದಷ್ಟೇ ಅಂತ ತೀರ್ಪು ನೀಡಿದೆ.

|

Updated on: Sep 15, 2023 | 5:22 PM

ಹುಬ್ಬಳ್ಳಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮತ್ತು ಮೂರು ದಿನಗಳ ಉತ್ಸವ ಅಚರಣೆಗೆ ಅನುಮತಿ ನೀಡದಂತೆ ನಗರದ ಅಂಜುಮನ್ ಸಮಿತಿ (Anjuman committee) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಗಣೇಶ ಉತ್ಸವ (Ganesh Utsav) ಆಚರಿಸಲು ಅನುಮತಿಗಾಗಿ ಕಳೆದೆರಡು ದಿನಗಳಿಂದ ಪಾಲಿಕೆ ಮುಂದೆ ಧರಣಿ ನಡೆಸುತ್ತಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Aravind Bellad), ಪಕ್ಷದ ಕಾರ್ಯಕರ್ತರು ಮತ್ತು ಹಿಂದೂ ಪರ ಸಂಘಟನೆಗಳ ಸದಸ್ಯರು ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ವಿಜಯೋತ್ಸವ ಆಚರಿಸಿದರು. ಟಿವಿ9 ಕನ್ನಡ ವಾಹಿನಿಯ ಹುಬ್ಬಳ್ಳಿ ವರದಿಗಾರನೊಂದಿಗೆ ಮಾತಾಡಿದ ಬೆಲ್ಲದ್, ಇದು ಎಲ್ಲ ಗಣಪತಿ ಭಕ್ತರಿಗೆ ಮತ್ತು ನಾಡಿನ ಜನತೆಗೆ ಸಂದ ಜಯವಾಗಿದೆ. ಕಳೆದ ವರ್ಷದಂತೆಯೇ ಮುಂದಿನ 5 ವರ್ಷಗಳ ಮೂರು-ದಿನ ಗಣೇಶನ ಉತ್ಸವ ಅಚರಿಸಲು ಅನುಮತಿ ನೀಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ನಿರ್ಣಯದ ವಿರುದ್ಧ ಅಂಜುಮನ್ ಕಮಿಟಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಕಮಿಟಿಗೆ ಸಿದ್ದರಾಮಯ್ಯ ಸರ್ಕಾರದ ಕುಮ್ಮಕ್ಕಿತ್ತು. ನ್ಯಾಯಲಯವು, ಈದ್ಗಾ ಮೈದಾನ ಕಮಿಟಿಯ ಸ್ವತ್ತಲ್ಲ ಅದು ಪಾಲಿಕೆಗೆ ಸೇರಿದ ಆಸ್ತಿ, ಕಮಿಟಿ ವರ್ಷಕ್ಕೆ ಎರಡು ಬಾರಿ ಅನುಮತಿ ಪಡೆದು ಪ್ರಾರ್ಥನೆ ಸಲ್ಲಿಸಬಹುದಷ್ಟೇ ಅಂತ ತೀರ್ಪು ನೀಡಿದೆ. ಮೈದಾನ ಉಪಯೋಗಿಸಲು ಯಾರಿಗೆ ಕೊಡಬೇಕು, ಯಾರಿಗೆ ನಿರಾಕರಿಸಬೇಕು ಅನ್ನೋದು ಪಾಲಿಕೆಯ ವಿವೇಚನೆಗೆ ಬಿಟ್ಟ ಸಂಗತಿಯಾಗಿದೆ ಎಂದು ನ್ಯಾಯಾಲಯ ಹೇಳಿರುವುದು ಸಮಸ್ತ ಹಿಂದೂಗಳಿಗೆ ದೊರೆತ ಜಯವಾಗಿದೆ ಎಂದು ಬೆಲ್ಲದ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಹೇಳಿದ್ದಕ್ಕೆ ಶಿವಕುಮಾರ್ ನಕ್ಕಿದ್ಯಾಕೆ?
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಹೇಳಿದ್ದಕ್ಕೆ ಶಿವಕುಮಾರ್ ನಕ್ಕಿದ್ಯಾಕೆ?
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್