Shanvi Srivastava: ಮಾತೃಭಾಷೆ ಹಿಂದಿಯಾದರೂ ಕರುನಾಡಿನ ಮೇಲಿನ ಪ್ರೀತಿಗೆ ಕನ್ನಡ ಕಲಿತ ಶಾನ್ವಿ ಶ್ರೀವಾಸ್ತವ
‘ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023’ ಕಾರ್ಯಕ್ರಮದಲ್ಲಿ ಶಾನ್ವಿ ಶ್ರೀವಾಸ್ತವ ಭಾಗಿ ಆಗಿದ್ದಾರೆ. ರಾಜ್ ಬಿ. ಶೆಟ್ಟಿ ಜೊತೆ ಅವರು ವೇದಿಕೆ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ. ತಾವು ಕನ್ನಡ ಕಲಿತಿದ್ದು ಯಾಕೆ ಎಂಬುದನ್ನು ಅವರು ವಿವರಿಸಿದ್ದಾರೆ.
ಖ್ಯಾತ ನಟಿ ಶಾನ್ವಿ ಶ್ರೀವಾಸ್ತವ (Shanvi Srivastava) ಅವರು ಉತ್ತರ ಭಾರತದವರು. ಅವರು ವೃತ್ತಿಬದುಕು ಕಟ್ಟಿಕೊಂಡಿದ್ದು ಕರ್ನಾಟಕದಲ್ಲಿ. ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಕರುನಾಡಿನಿಂದ ಅವರಿಗೆ ಹಣ, ಹೆಸರು ಎಲ್ಲವೂ ಸಿಕ್ಕಿದೆ. ಆ ಪ್ರೀತಿಗಾಗಿ ಅವರು ಕನ್ನಡ ಕಲಿತಿದ್ದಾರೆ. ‘ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023’ (TV9 Karnataka Summit 2023) ಕಾರ್ಯಕ್ರಮದಲ್ಲಿ ಶಾನ್ವಿ ಶ್ರೀವಾಸ್ತವ ಭಾಗಿ ಆಗಿದ್ದಾರೆ. ರಾಜ್ ಬಿ. ಶೆಟ್ಟಿ (Raj B. Shetty) ಜೊತೆ ಅವರು ವೇದಿಕೆ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ. ತಾವು ಕನ್ನಡ ಕಲಿತಿದ್ದು ಯಾಕೆ ಎಂಬುದನ್ನು ಅವರು ವಿವರಿಸಿದ್ದಾರೆ. ರಕ್ಷಿತ್ ಶೆಟ್ಟಿ, ಯಶ್, ಗಣೇಶ್, ದರ್ಶನ್ ಮುಂತಾದ ಸ್ಟಾರ್ ನಟರ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos