ಚಾಮುಂಡಿ ತಾಯಿಯ ತವರೂರು ಮೈಸೂರಿನಲ್ಲಿ 100 ವರ್ಷ ಇತಿಹಾಸದ ಶ್ರೀನಿವಾಸ ದೇಗುಲಕ್ಕೆ ವಿಶೇಷ ಶ್ರಾವಣ ಕಳೆ

| Updated By: ಸಾಧು ಶ್ರೀನಾಥ್​

Updated on: Aug 19, 2023 | 9:39 AM

ನಾಡಿನಾದ್ಯಂತ ಶ್ರಾವಣ ಮಾಸದ ಸಂಭ್ರಮ ಮನೆ ಮಾಡಿದೆ. ಇಂದು ಮೊದಲ ಶ್ರಾವಣ ಶನಿವಾರ. ಅದರಲ್ಲೂ ಸಾಂಸ್ಕೃತಿಕ ನಗರಿ, ಚಾಮುಂಡಿ ತಾಯಿಯ ತವರು ಮೈಸೂರಿನಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಕಳೆಕಟ್ಟಿದೆ. ಮೈಸೂರು ಜಯನಗರ ಬಡಾವಣೆಯ ಶ್ರೀನಿವಾಸ ದೇಗುಲದಲ್ಲಿ ವಿಶೇಷ ಅಲಂಕಾರ, ವಿಶೇಷ ಪೂಜೆ ನಡೆದಿದೆ. ಶ್ರೀನಿವಾಸನಿಗೆ ಅಭಿಷೇಕ ಮಂಗಳಾರತಿ ಸೇವೆ ನಡೆದಿದೆ. ದೇವಸ್ಥಾನದ ಒಳಗೆ ಹೊರಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಅಂದಹಾಗೆ ನೂರು ವರ್ಷಗಳ ಇತಿಹಾಸ ಈ ದೇವಸ್ಥಾನಕ್ಕೆ ಇದೆ.

ಶ್ರಾವಣಮಾಸ ಬಂತೆಂದರೆ ಎಲ್ಲಾ ವಿಷ್ಣು ದೇವಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಅದೇ ರೀತಿ ಮೈಸೂರಿನ ಜಯನಗರದಲ್ಲಿರುವ ಶ್ರೀನಿವಾಸ ದೇಗುಲದಲ್ಲಿ (jayanagara in Mysore) ಶ್ರಾವಣಮಾಸದ ಮೊದಲ ಶನಿವಾರದ (Shravana puja) ಸಡಗರ ಸಂಭ್ರಮ ಜೋರಾಗಿದೆ. ಈ ಶ್ರೀನಿವಾಸ ದೇಗುಲಕ್ಕೆ ನೂರು ವರ್ಷದ ಇತಿಹಾಸವಿದೆ (century old Venkateshwara swamy Temple). ಈ ದೇವಸ್ಥಾನ ಯಾವುದೇ ಟ್ರಸ್ಟ್ ಅಥವಾ ಸಂಘ ಸಂಸ್ಥೆಯ ಅಧೀನದಲ್ಲಿರದೆ ಇರುವುದು ವಿಶೇಷ. ಸ್ಥಾಪನೆಯಾದ ದಿನದಿಂದ ಈ ದೇವಸ್ಥಾನವನ್ನು ಇದರ ಸಂಸ್ಥಾಪಕರ ಕುಟುಂಬದವರೇ ನಿರ್ವಹಣೆ ಮಾಡುತ್ತಿರುವುದು ಮತ್ತೊಂದು ವಿಶೇಷ.

ಈ ದೇವಸ್ಥಾನವನ್ನು ಮೈಸೂರಿನ ವೆಂಕಟಪ್ಪ ಅವರು 1915ರಲ್ಲಿ ಕಟ್ಟಿಸಿದರು. ವೆಂಕಟಪ್ಪ ಅವರು ತಮ್ಮ ಸ್ವಂತ ಜಾಗದಲ್ಲಿ ಸ್ವಂತ ಹಣದಿಂದ ಈ ದೇವಸ್ಥಾನ ನಿರ್ಮಾಣ ಮಾಡಿದರು. 110 ವರ್ಷಗಳ ಕಾಲ ಬದುಕಿದ್ದ ವೆಂಕಟ್ಟಪ್ಪ ಅವರು ಬದುಕಿರುವವರೆಗೂ ಶ್ರೀನಿವಾಸನ ಸೇವೆ ಸಲ್ಲಿಸಿದರು.

Also Read: Shravana Shanivara 2023: ಶ್ರಾವಣದ ಮೊದಲ ಶನಿವಾರ, ರಾಜ್ಯದ ದೇವಾಲಯಗಳಲ್ಲಿ ಭಕ್ತ ಸಾಗರ

ಇದಾದ ನಂತರ ವೆಂಕಟಪ್ಪ ಅವರ ಮಗ ಕೆಂಪಯ್ಯ ಪೂಜಾ ಕೈಂಕರ್ಯವನ್ನು ಮುಂದುವರಿಸಿದರು. ಸದ್ಯ ಕೆಂಪಯ್ಯ ಅವರ ಮಾರ್ಗದರ್ಶನದಲ್ಲಿ ಅವರ ಮಗ ಹಾಗೂ ವೆಂಕಟಪ್ಪ ಅವರ ಮೊಮ್ಮಗ ಶ್ರೀನಿವಾಸ್ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಶಿಕ್ಷಕರಾಗಿರುವ ಶ್ರೀನಿವಾಸ್ ಸಹಾ ತಮ್ಮ ಕೊನೆಯುಸಿರಿರುವವರೆಗೂ ದೇವಸ್ಥಾನದ ಸೇವೆ ಸಲ್ಲಿಸುವ ಸಂಕಲ್ಪ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on