Video: ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವನ್ನು ಮಾನಸಿಕ ನೈರ್ಮಲ್ಯವೆಂದು ಕರೆಯಲಾಗುತ್ತದೆ, ನಿಮ್ಮ ಹಲ್ಲಿನ ನೈರ್ಮಲ್ಯದಂತೆಯೇ ಮನಸ್ಸಿನಲ್ಲಿರುವ ಕೊಳೆಯನ್ನು ತೆಗೆದುಹಾಕಲು ಅದು ಅವಶ್ಯಕ ಎಂದು ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆದ ಮೊಟ್ಟಮೊದಲ ವಿಶ್ವ ಧ್ಯಾನ ದಿನದಲ್ಲಿ ಪಾಲ್ಗೊಂಡು ಮಾತನಾಡಿದರು. ಧ್ಯಾನವು ಏಕಾಗ್ರತೆಯ ಮೆಟ್ಟಿಲಿನಂತೆ ಕಾರ್ಯ ನಿರ್ವಹಿಸುತ್ತದೆ, ಯಾವುದೋ ಒಂದು ವಿಷಯದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ನೆರವಾಗುತ್ತದೆ ಎಂದರು.
ಧ್ಯಾನವನ್ನು ಮಾನಸಿಕ ನೈರ್ಮಲ್ಯವೆಂದು ಕರೆಯಲಾಗುತ್ತದೆ, ನಿಮ್ಮ ಹಲ್ಲಿನ ನೈರ್ಮಲ್ಯದಂತೆಯೇ ಮನಸ್ಸಿನಲ್ಲಿರುವ ಕೊಳೆಯನ್ನು ತೆಗೆದುಹಾಕಲು ಅದು ಅವಶ್ಯಕ ಎಂದು ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆದ ಮೊಟ್ಟಮೊದಲ ವಿಶ್ವ ಧ್ಯಾನ ದಿನದಲ್ಲಿ ಪಾಲ್ಗೊಂಡು ಮಾತನಾಡಿದರು. ಧ್ಯಾನವು ಏಕಾಗ್ರತೆಯ ಮೆಟ್ಟಿಲಿನಂತೆ ಕಾರ್ಯ ನಿರ್ವಹಿಸುತ್ತದೆ, ಯಾವುದೋ ಒಂದು ವಿಷಯದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ನೆರವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಖಿನ್ನತೆ ಪ್ರಮಾಣ ಹೆಚ್ಚಾಗಿದೆ, ಸಣ್ಣ ಪುಟ್ಟ ವಿಷಯಗಳಿಗೂ ತಲೆ ಕಡೆಸಿಕೊಂಡು ಮಾನಸಿಕ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ, ಇದರಿಂದ ಹೊರ ಬರಲು ಧ್ಯಾನ ಅತ್ಯವಶ್ಯ. ಇತತರಿಗೆ ಹಾನಿ ಮಾಡುವ ಹಾಗೂ ಸಮಾಜವಿರೋಧಿ ಚಟುವಟಿಕೆಗಳಿಂದ ನಿಮ್ಮನ್ನು ದೂರವಿರುವಂತೆ ಮಾಡುತ್ತದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ