ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?

Updated on: Jul 10, 2025 | 6:50 AM

ಗುರುಪೂರ್ಣಿಮೆ ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಗುರುಗಳನ್ನು ಸ್ಮರಿಸುವ ಮತ್ತು ಅವರನ್ನು ಗೌರವಿಸುವ ದಿನ. ವೇದವ್ಯಾಸರ ಜನ್ಮದಿನವಾಗಿಯೂ ಇದನ್ನು ಆಚರಿಸಲಾಗುತ್ತದೆ. ಗುರುಗಳ ದರ್ಶನ, ಪಾದಪೂಜೆ, ದಾನ, ಭಜನೆ ಮುಂತಾದ ಕ್ರಿಯೆಗಳ ಮೂಲಕ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಇದರಿಂದ ಆರೋಗ್ಯ, ಮಾನಸಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ನಂಬಕೆ ಇದೆ.

ಬೆಂಗಳೂರು, ಜುಲೈ 10: ಗುರುಪೂರ್ಣಿಮೆ ಒಂದು ಪವಿತ್ರ ಹಬ್ಬವಾಗಿದ್ದು, ಗುರುಗಳನ್ನು ಸ್ಮರಿಸಿ ಅವರ ಆಶೀರ್ವಾದ ಪಡೆಯಲು ಭಕ್ತರು ವಿಶೇಷವಾಗಿ ಆಚರಿಸುತ್ತಾರೆ. ಈ ದಿನ ವೇದವ್ಯಾಸರ ಜನ್ಮದಿನವಾಗಿಯೂ ಪರಿಗಣಿಸಲಾಗುತ್ತದೆ. ಗುರುಗಳಿಗೆ ಗೌರವ ಸಲ್ಲಿಸುವುದು, ಪಾದಪೂಜೆ, ದಾನ ಮಾಡುವುದು ಮುಂತಾದ ಆಚರಣೆಗಳು ಈ ದಿನದ ವಿಶೇಷ. ಡಾ. ಬಸವರಾಜ್ ಗುರೂಜಿ ಅವರು ಈ ದಿನದ ಮಹತ್ವವನ್ನು ವಿವರಿಸುತ್ತಾ, ಗುರುಗಳಿಂದ ಪಡೆಯುವ ಆಶೀರ್ವಾದ ಮತ್ತು ಮಾರ್ಗದರ್ಶನದ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾರೆ.