ಡಬ್ಬಿಂಗ್​ನಲ್ಲಿ ಕ್ಯೂಟ್​ ಆಗಿ ಕಾಣಿಸಿಕೊಂಡ ಶ್ರೀಲೀಲಾ; ವೈರಲ್​ ಆಯ್ತು ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Feb 04, 2022 | 4:22 PM

‘ಬೈ ಟು ಲವ್​’ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​ ಒಂದು ಬಂದಿದೆ. ಇಡೀ ಚಿತ್ರತಂಡ ಈಗ ಡಬ್ಬಿಂಗ್​ ಕೆಲಸದಲ್ಲಿ ಬ್ಯುಸಿ ಇದೆ. ಮೊದಲ ಬಾರಿಗೆ ಶ್ರೀಲೀಲಾ ಡಬ್ಬಿಂಗ್ ಮಾಡಿದ್ದಾರೆ. ಇದು ತುಂಬಾನೇ ಫನ್ನಿಯಾಗಿತ್ತು.

‘ಬೈ ಟು ಲವ್​’ ಚಿತ್ರದಲ್ಲಿ (By Two Love Movie)  ಧನ್ವೀರ್​ ಗೌಡ (Dhanveer Gowda) ಹಾಗೂ ಶ್ರೀಲೀಲಾ (Sree Leela) ನಟಿಸುತ್ತಿದ್ದಾರೆ. ಈ ಚಿತ್ರದ ಬಿಡುಗಡೆಗಾಗಿ ಪ್ರೇಕ್ಷಕರು ಕಾದಿದ್ದಾರೆ. ಈ ಚಿತ್ರದಲ್ಲಿ ಒಂದೊಳ್ಳೆಯ ಲವ್​ಸ್ಟೋರಿ ಇದೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ಈಗ ಹೊಸ ಅಪ್​ಡೇಟ್​ ಒಂದು ಬಂದಿದೆ. ಇಡೀ ಚಿತ್ರತಂಡ ಈಗ ಡಬ್ಬಿಂಗ್​ ಕೆಲಸದಲ್ಲಿ ಬ್ಯುಸಿ ಇದೆ. ಮೊದಲ ಬಾರಿಗೆ ಶ್ರೀಲೀಲಾ ಡಬ್ಬಿಂಗ್ ಮಾಡಿದ್ದಾರೆ. ಇದು ತುಂಬಾನೇ ಫನ್ನಿಯಾಗಿತ್ತು. ಈ ವಿಡಿಯೋ ಈಗ ಸಖತ್​ ವೈರಲ್​ ಆಗಿದೆ. ‘ನಾನು ಇದೇ ಮೊದಲ ಬಾರಿಗೆ ಡಬ್​ ಮಾಡಿದ್ದೇನೆ. ನಾನು ನಟಿಸಿದ ದೃಶ್ಯಗಳಲ್ಲಿ ಬೇರೆಯವರ ಧ್ವನಿ ಇದ್ದರೆ ಅದು ಅಷ್ಟು ಪರ್ಫೆಕ್ಟ್​ ಇರುವುದಿಲ್ಲ. ಆ್ಯಕ್ಟ್​ ಮಾಡುವಾಗ ನಾನು ಎಲ್ಲಿ ಒತ್ತು ಕೊಟ್ಟಿರುತ್ತೇನೋ ಡಬ್​ ಮಾಡಿದವರು ಅಲ್ಲಿ ಒತ್ತುಕೊಟ್ಟಿರುವುದಿಲ್ಲ’ ಎಂದಿದ್ದಾರೆ ಶ್ರೀಲೀಲಾ. ‘ಬೈ ಟು ಲವ್​’ ಸಿನಿಮಾಗೆ ಅಲೆಮಾರಿ ಸಂತು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: ಫೆ.5ರಿಂದ ಚಿತ್ರಮಂದಿರದಲ್ಲಿ ಹೌಸ್​ಫುಲ್​ಗೆ ಅವಕಾಶ; ಸ್ಯಾಂಡಲ್​ವುಡ್​ನಲ್ಲಿ ಹಬ್ಬದ ವಾತಾವರಣ

ಸಂಕ್ರಾಂತಿಗೆ ಧನ್ವೀರ್ ಹೊಸಸಿನಿಮಾ ಶೀರ್ಷಿಕೆ ಘೋಷಣೆ; ರಕ್ತಸಿಕ್ತ ಚಾಕು ಹಿಡಿದು ಬಂದ ‘ವಾಮನ’

Follow us on