ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ ವೈಭವ; 85 ಅಡಿ ಎತ್ತರ ರಥ ಎಳೆದು ಪುನೀತರಾದ ಭಕ್ತರು

| Updated By: ಆಯೇಷಾ ಬಾನು

Updated on: Feb 17, 2023 | 10:05 AM

ಮಾಘ ಮಾಸದ ಬಹುಳ ದಶಮಿಯ ಮೂಲ ನಕ್ಷತ್ರ ಕೂಡುವ ವೇಳೆ ಕೊಟ್ಟೂರೇಶ್ವರರು ಜೀವಂತ ಸಮಾಧಿಯಾಗಿದ್ರು. ಅದೇ ಮುಹೂರ್ತದಲ್ಲಿಯೇ ಪ್ರತಿ ವರ್ಷವೂ ಗುರುಬಸವೇಶ್ವರರ ರಥೋತ್ಸವ ಜರುಗುತ್ತೆ.

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರನ ರಥೋತ್ಸವದ ವೈಭವಯುತ ದೃಶ್ಯಗಳಿವು. ಕೂಟ್ಟೂರಿನ ಗುರಬಸವೇಶ್ವರ ಜಾತ್ರೆ ಅಂದ್ರೆ ಮಧ್ಯ ಕರ್ನಾಟಕದಲ್ಲೆ ಅತಿ ದೊಡ್ಡ ಜಾತ್ರೆ. ರಾಜ್ಯದ ನಾನಾ ಭಾಗಗಳಿಂದ ಬರೋ ಲಕ್ಷಾಂತರ ಭಕ್ತರು, ಕೊಟ್ಟೂರೇಶ್ವರನ ದರ್ಶನ ಪಡೆದು. ಸಡಗರ ಸಂಭ್ರಮದಿಂದ ರಥ ಎಳೆದು ಭಕ್ತಿ ಮೆರೆಯುತ್ತಾರೆ.

ಮಾಘ ಮಾಸದ ಬಹುಳ ದಶಮಿಯ ಮೂಲ ನಕ್ಷತ್ರ ಕೂಡುವ ವೇಳೆ ಕೊಟ್ಟೂರೇಶ್ವರರು ಜೀವಂತ ಸಮಾಧಿಯಾಗಿದ್ರು. ಅದೇ ಮುಹೂರ್ತದಲ್ಲಿಯೇ ಪ್ರತಿ ವರ್ಷವೂ ಗುರುಬಸವೇಶ್ವರರ ರಥೋತ್ಸವ ಜರುಗುತ್ತೆ. ಇನ್ನು ಹರಿಜನ ಸಮುದಾಯದ ಮುತ್ತೈದೆಯರು ಶ್ರೀಸ್ವಾಮಿಗೆ ಕಳಸದಾರತಿ ಬೆಳಗುತ್ತಿದ್ದಂತೆ ರಥೋತ್ಸವ ಆರಂಭವಾಯ್ತು. ಲಕ್ಷಾಂತರ ಭಕ್ತರು 85 ಅಡಿ ಎತ್ತರ ರಥವನ್ನ ಎಳೆದು ಪುನೀತರಾದ್ರು.

ವಿಶೇಷ ಅಂದ್ರೆ ಈ ಜಾತ್ರೆ ವೇಳೆ ಹರಕೆ ಹೊತ್ತರೇ.. ಇಷ್ಟಾರ್ಥ ಸಿದ್ದಿಯಾಗುತ್ತಂತೆ. ಹಾಗಾಗಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿ, ಕೊಟ್ಟೂರೇಶ್ವರನ ದರ್ಶನ ಪಡೆದು ಹರಕೆ ಹೊತ್ತುಕೊಳ್ತಾರೆ. ಒಟ್ನಲ್ಲಿ ಈ ಬಾರಿಯ ಜಾತ್ರಾಮಹೋತ್ಸವ ಅದ್ಧೂರಿಯಾಗಿ ನಡೆದಿದ್ದು, ಮೂರು ಲಕ್ಷಕ್ಕೂ ಅಧಿಕ ಭಕ್ತರು ಸಂಭ್ರಮಕ್ಕೆ ಸಾಕ್ಷಿಯಾದ್ರು.