ಅಸ್ಥಿ ವಿಸರ್ಜನೆ ವಿಧಿವಿಧಾನ ಪೂರೈಸಲು ಕುಳಿತಿದ್ದ ವಿಜಯ ರಾಘವೇಂದ್ರ ಮೈಮೇಲೆ ಮುರಳಿ ಅಪ್ಯಾಯತೆಯಿದ ಅಂಗವಸ್ತ್ರ ಹೊದೆಸಿದರು

Updated on: Aug 11, 2023 | 4:36 PM

ನದಿ ತೀರದಲ್ಲಿ ಅರ್ಚಕರಿಂದ ಪೂಜಾ ವಿಧಿವಿಧಾನ ನಡೆಯುವಾಗ ಅವರ ಮುಂದೆ ಈಡಿಗ ಸಮುದಾಯದ ಪದ್ಧತಿಯಂತೆ ಕೇಶಮುಂಡನ ಮಾಡಿಸಿಕೊಂಡ ಪುತ್ರ ಶೌರ್ಯನೊಂದಿಗೆ ಪಂಚೆ ಉಟ್ಟು ವಿಜಯ್ ಕೂತಿದ್ದರು.

ಮಂಡ್ಯ: ವಿಜಯ ರಾಘವೇಂದ್ರ (Vijay Raghavendra) ಮತ್ತು ಶ್ರೀಮುರಳಿ (Sri Murali) ನಡುವಿನ ಪ್ರೀತಿ, ಬಾಂಧವ್ಯದ ಬಗ್ಗೆ ನಾವು ಹೇಳುತ್ತಲೇ ಇದ್ದೇವೆ. ಅದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಇಂದು ಬೆಳಗ್ಗೆ ಸ್ಪಂದನ ವಿಜಯ್ ಅವರ ಹಾಲು ತುಪ್ಪ ಬಿಡುವ ವಿಧಿ ಪೂರ್ತಿಗೊಳಿಸಿದ ಬಳಿಕ ಕಾವೇರಿ ನದಿಯಲ್ಲಿ (River Cauvery) ಅಸ್ಥಿ ವಿಸರ್ಜನೆ ಮಾಡಲು ವಿಜಯ ರಾಘವೇಂದ್ರ ಕುಟುಂಬ ಮಂಡ್ಯಗೆ ತೆರಳಿತು. ನದಿ ತೀರದಲ್ಲಿ ಅರ್ಚಕರಿಂದ ಪೂಜಾ ವಿಧಿವಿಧಾನ ನಡೆಯುವಾಗ ಅವರ ಮುಂದೆ ಈಡಿಗ ಸಮುದಾಯದ ಪದ್ಧತಿಯಂತೆ ಕೇಶಮುಂಡನ ಮಾಡಿಸಿಕೊಂಡ ಪುತ್ರ ಶೌರ್ಯನೊಂದಿಗೆ ಪಂಚೆ ಉಟ್ಟು ವಿಜಯ್ ಕೂತಿದ್ದರು. ಆಗಲೇ ಮುರಳಿ, ಒಂದಿ ಶ್ವೇತವರ್ಣದ ಅಂಗವಸ್ತ್ರವನ್ನು ಅಣ್ಣನ ಮೇಲೆ ಹೊದಿಸುತ್ತಾರೆ. ಅದನ್ನು ಮುರಳಿ ಎಷ್ಟು ಅಪ್ಯಾಯತೆಯಿಂದ ಮಾಡುತ್ತಾರೆ ಅನ್ನೋದನ್ನು ಗಮನಿಸಿ. ಈ ಕಾರಣಕ್ಕಾಗೇ ಅವರ ನಡುವಿನ ಬಾಂಧವ್ಯದ ಬಗ್ಗೆ ನಾವು ಪದೇಪದೆ ಹೇಳುತ್ತಿದ್ದೇವೆ. ಅವರಿಬ್ಬರ ಹಿಂದೆ ಎಸ್ ಎ ಚಿನ್ನೇಗೌಡರ ಕುಟುಂಬ ಕುಳಿತಿರುವುದು ಕಾಣಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 11, 2023 04:36 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More