Video: ಶ್ರೀರಾಮ ದೇಶ ಸೇವೆ ಮಾಡಲು ಬಂದಿದ್ದಾನೆ, ರಾಮನ ಪರ ಸೀತೆ ಪ್ರಚಾರ
ಮೀರತ್ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಅರುಣ್ ಗೋವಿಲ್ ಪರ ನಟಿ ದೀಪಿಕಾ ಚಿಖ್ಲಿಯಾ ಅವರು ಪ್ರಚಾರ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ ಪ್ರಚಾರ ಸಮಯದಲ್ಲಿ ಮಾತನಾಡಿದ ದೀಪಿಕಾ ಶ್ರೀರಾಮ ದೇಶ ಸೇವೆ ಮಾಡಲು ಬಂದಿದ್ದಾನೆ. ಅರುಣ್ ಗೋವಿಲ್ ಅವರನ್ನು ನಾವು ಬೆಂಬಲಿಸುತ್ತೇವೆ. ಜತೆಗೆ ಅವರಿಗೆ ಮತದಾನ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮೀರತ್, ಏ.23: ಲೋಕಸಭೆ ಚುನಾವಣೆ (Lok Sabha) ಪ್ರಾರಂಭವಾಗಿದ್ದು ಮೊದಲ ಹಂತದ ಚುನಾವಣೆ ಮುಗಿದಿದೆ. ಇದೀಗ ಎರಡನೇ ಹಂತ ಚುನಾವಣೆ 26ರಂದು ನಡೆಯಲಿದೆ. ಎಲ್ಲ ಪಕ್ಷಗಳು ಭರಾಟೆಯಲ್ಲಿ ಪ್ರಚಾರ ಮಾಡುತ್ತಿದೆ. ಈ ಬಾರಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಪಡೆಯಲೇಬೇಕು ಎಂಬ ಹಠಕ್ಕೆ ಬಿದಿದ್ದೆ. ಈ ಕಡೆ ಕಾಂಗ್ರೆಸ್ ಗ್ಯಾರಂಟಿ ಅಸ್ತ್ರವನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿದೆ. ಉತ್ತರ ಪ್ರದೇಶದ ಮೀರತ್ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಅರುಣ್ ಗೋವಿಲ್ (Arun Govil) ಅವರು ಪ್ರಚಾರ ನಡೆಸಿದ್ದಾರೆ. ಅರುಣ್ ಗೋವಿಲ್ ಪರ ಪ್ರಚಾರದಲ್ಲಿ ನಟಿ ದೀಪಿಕಾ ಚಿಖ್ಲಿಯಾ (Dipika Chikhlia) ಅವರು ಕೂಡ ಭಾಗವಹಿಸಿದ್ದಾರೆ. ‘ರಾಮಾಯಣ’ ಸೀರಿಯಲ್ನಲ್ಲಿ ಅರುಣ್ ಗೋವಿಲ್ ರಾಮನಾಗಿ, ದೀಪಿಕಾ ಚಿಖ್ಲಿಯಾ ಅವರು ಸೀತೆಯಾಗಿ ನಟಿಸಿದ್ದಾರೆ. ಈ ಮೂಲಕವೇ ಅವರು ಚಿರಪರಿಚಿತರು, ಅನೇಕ ಕಾರ್ಯಕ್ರಮಗಳಲ್ಲಿ ಇಬ್ಬರು ಜತೆಗೆ ಕಾಣಿಸಿಕೊಂಡಿದ್ದಾರೆ. ಇದೀಗ ಮೀರತ್ ಲೋಕಸಭೆಯ ಬಿಜೆಪಿ ಅಭ್ಯರ್ಥಿಯಾಗಿರುವ ಅರುಣ್ ಗೋವಿಲ್ ಪರ ಪ್ರಚಾರದಲ್ಲಿ ಅವರಿಗೆ ದೀಪಿಕಾ ಚಿಖ್ಲಿಯಾ ಸಾಥ್ ನೀಡಿದ್ದಾರೆ. ಈ ಬಗ್ಗೆ ಒಂದು ವಿಡಿಯೋ ಕೂಡ ವೈರಲ್ ಆಗಿದ್ದು. ಇದನ್ನು ನೋಡಿದ ಅನೇಕರು, ರಾಮನ ಪರ ಸೀತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರಚಾರ ಸಮಯದಲ್ಲಿ ಎಎನ್ಐ ಜತೆಗೆ ಮಾತನಾಡಿದ ದೀಪಿಕಾ ಚಿಖ್ಲಿಯಾ, ಭಗವಾನ್ ರಾಮನು ದೇಶ ಸೇವೆ ಮಾಡಲು ಬಂದಿದ್ದಾನೆ ಮತ್ತು ನಾವು ಅವರನ್ನು ಬೆಂಬಲಿಸುತ್ತಿದ್ದೇವೆ. ನಾನು ಅರುಣ್ ಜಿಗೆ ಮತ ನೀಡುವಂತೆ ನಾನು ಜನರನ್ನು ಕೋರುತ್ತೇನೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ