ಹನ್ನೆರಡು ವರ್ಷದ ಬಳಿಕ ಒಂದಾದ ಕಿಟ್ಟಿ-ಯೋಗಿ: ಸಿನಿಮಾ ಯಾವುದು?

|

Updated on: Dec 02, 2023 | 8:33 PM

Kitty-Yogi: ಹನ್ನೆರಡು ವರ್ಷಗಳ ಬಳಿಕ ನಟ ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗಿ ಅವರುಗಳು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ. ಯಾವುದು ಆ ಸಿನಿಮಾ?

ಲೂಸ್ ಮಾದ ಯೋಗಿ (Yogi) ಹಾಗೂ ಶ್ರೀನಗರ ಕಿಟ್ಟಿ (Sri Nagara Kitty) ಇಬ್ಬರೂ ಮತ್ತೆ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಪುನೀತ್ ರಾಜ್​ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ‘ಹುಡುಗರು’ ಸಿನಿಮಾದಲ್ಲಿ ಪುನೀತ್​ರ ಇಬ್ಬರು ಆತ್ಮೀಯ ಗೆಳೆಯರ ಪಾತ್ರದಲ್ಲಿ ಕಿಟ್ಟಿ ಹಾಗೂ ಯೋಗಿ ನಟಿಸಿದ್ದರು. ಈಗ ‘ರೋಸಿ’ ಹೆಸರಿನ ಸಿನಿಮಾದಲ್ಲಿ ಈ ಇಬ್ಬರು ನಟರು ಒಟ್ಟಿಗೆ ನಟಿಸುತ್ತಿದ್ದಾರೆ. ಡಾಲಿ ಧನಂಜಯ್ ನಟಿಸಿದ್ದ ‘ಹೆಡ್ಡು ಬುಷ್’ ಸಿನಿಮಾ ನಿರ್ದೇಶನ ಮಾಡಿದ್ದ ಶೂನ್ಯ ಈಗ ‘ರೋಸಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ