ಚುನಾವಣೆಯಲ್ಲಿ ಸೋತ ಪೂರ್ಣಿಮಾ ಶ್ರೀನಿವಾಸ್ ಈಗಲೂ ಹಿರಿಯೂರು ಶಾಸಕಿಯೇ? ಅವರ ಕಾರನ್ನು ಅದನ್ನೇ ಹೇಳುತ್ತದೆ!

ಚುನಾವಣೆಯಲ್ಲಿ ಸೋತ ಪೂರ್ಣಿಮಾ ಶ್ರೀನಿವಾಸ್ ಈಗಲೂ ಹಿರಿಯೂರು ಶಾಸಕಿಯೇ? ಅವರ ಕಾರನ್ನು ಅದನ್ನೇ ಹೇಳುತ್ತದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 02, 2023 | 6:17 PM

ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸಗೆ ಐಡೆಂಟಿಟಿ ಕ್ರೈಸಿಸ್ ಕಾಡುತ್ತಿರಬಹುದು. ವ್ಯಕ್ತಿಯೊಬ್ಬ ತನ್ನ ಬದುಕಿನ ಒಂದು ಹಂತದಲ್ಲಿ ಗೊಂದಲಮಯ ಸ್ಥಿತಿ ಇಲ್ಲವೇ ಅಭದ್ರತೆಯಿಂದ ಬಳಲುತ್ತಾನಂತೆ. ಅವನ ಬದುಕಿನಲ್ಲಿ ಬದಲಾವಣೆಯೊಂದು ನಡೆದಾಗ, ತನ್ನ ಐಡೆಂಟಿಟಿ ಮತ್ತು ಜನಪ್ರಿಯತೆ ಅಸ್ಥಿರ, ಅಭದ್ರ ಅನಿಸಿದಾಗ ಈ ಪೀಡೆ ಉಂಟಾಗುತ್ತದೆ ಅಂತ ಮನಶಾಸ್ತ್ರಜ್ಞರು ಹೇಳುತ್ತಾರೆ. ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಲ್ಲೂ ಇಂಥ ಭಾವನೆ ಉಂಟಾಗಿರಬಹುದೇ?

ಚಿತ್ರದುರ್ಗ: ಇದನ್ನು ದಾರ್ಷ್ಟ್ಯತೆ ಅನ್ನಬೇಕೋ ಅಥವಾ ಭಂಡತನವೋ ಅರ್ಥವಾಗುತ್ತಿಲ್ಲ ಮಾರಾಯ್ರೇ. ಇವರು ಕನ್ನಡಿಗರಿಗೆಲ್ಲ ಚೆನ್ನಾಗಿ ಗೊತ್ತು. ಜಿಲ್ಲೆಯ ಹಿರಿಯೂರು ಮಾಜಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ (K Poornima Srinivas) ಮೊನ್ನೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ತಮ್ಮ ಪತಿ ಡಿಟಿ ಶ್ರೀನಿವಾಸ್ (DT Srinivas) ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು ಮಾಜಿ ಶಾಸಕಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಅವರು ಪತಿಯೊಂದಿಗೆ ಆಗಮಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರು ಕಚೇರಿಗೆ ಭೇಟಿ ನೀಡಿದ್ದು ಖಂಡಿತ ಸುದ್ದಿ ಅಲ್ಲ, ಆದರೆ ಸುದ್ದಿಯ ವಸ್ತುವಾಗಿದ್ದು ಅವರ ಕಾರು. ಅವರ ಕಾರಿನ ಮೇಲೆ ಕೆ ಪೂರ್ಣಿಮಾ, ಹಿರಿಯೂರು ಶಾಸಕಿ (Hiriyur MLA) ಅಂತ ಮೆತ್ತಿರುವ ಗುರುತಿನ ಚೀಟಿ ಈಗಲೂ ಹಾಗೆಯೇ ಇದೆ! ಅವರು ಚುನಾವಣೆಲ್ಲಿ ಸೋತು ಹೆಚ್ಚುಕಡಿಮೆ 7 ತಿಂಗಳು ಕಳೆದಿವೆ. ಮತ್ತೊಂದು ಸಂಗತಿಯೆಂದರೆ ಅವರು ಬಿಜೆಪಿಯ ಶಾಸಕಿಯಾಗಿದ್ದರು. ಸೋತರೂ ಶಾಸಕಿ ಅಂತ ಕರೆಸಿಕೊಳ್ಳುವ ಉಮೇದಿ ಅವರಲ್ಲಿದೆಯೇ? ಗೊತ್ತಿಲ್ಲ ಮಾರಾಯ್ರೇ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ