ಗುತ್ತಿಗೆದಾರ ಅಂಬಿಕಾಪತಿ ಸಾವಿಗೆ ಕಾರಣ ಬೇರೆನೋ ಇದೆಯೆಂಬ ಮಾಹಿತಿ ಲಭ್ಯವಾಗುತ್ತಿದೆ: ಆರ್ ಅಶೋಕ, ವಿಪಕ್ಷ ನಾಯಕ
ಆರ್ ಅಶೋಕ, ಹೆಚ್ ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಬೆಳಗಾವಿ ವಿಧಾನಸಭಾ ಅಧಿವೇಶನ ರೋಚಕವಾಗಲಿರುವ ಬಗ್ಗೆ ಅನುಮಾನ ಬೇಡ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಮ್ಮಲ್ಲಿ ಅನೇಕ ಅಸ್ತ್ರಗಳಿವೆ ಅಂತ ಅಶೋಕ ಹೇಳುತ್ತಿದ್ದಾರೆ. ಎಲ್ಲ ಅಸ್ತ್ರಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ ಅಂತ ಶಿವಕುಮಾರ್ ಹೇಳುತ್ತಾರೆ.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಎಗ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ (R Ashoka) ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಜಂಟಿಯಾಗಿ ಸರ್ಕಾರದ ಮೇಲೆ ದಾಳಿ ನಡೆಸುವುದಾಗಿ ಹೇಳಿದರು. ಜೆಡಿಎಸ್ ಪ್ರಸ್ತಾಪಿಸುವ ನಿಲುವಳಿ ಸೂಚನೆಗಳಿಗೆ ಬಿಜೆಪಿ ಮತ್ತು ಬಿಜೆಪಿಯ ಪ್ರಸ್ತಾವನೆಗಳಿಗೆ ಜೆಡಿಎಸ್ ಅನುಮೋದನೆ ನೀಡಲಿವೆ ಎಂದು ಅಶೋಕ ಹೇಳಿದರು. ಬಿಬಿಎಂಪು ಗುತ್ತಿಗೆದಾರ ಅಂಬಿಕಾಪತಿ (R Ambikapathy) ಸಾವಿನ ಬಗ್ಗೆಯೂ ಪ್ರಶ್ನೆ ಎತ್ತಲಾಗುವುದು ಎಂದು ಹೇಳಿದ ಅವರು, ಅಸಲಿಗೆ ಅವರ ಸಾವಿಗೆ ಬೇರೆ ಕಾರಣವಿದೆ, ಬಿಜೆಪಿ ಶಾಸಕರಾದ ಮುನಿರತ್ನ ನಾಯ್ಡು ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಮೃತರ ಕುಟುಂಬವನ್ನು ಭೇಟಿಮಾಡಿದ್ದಾರೆ. ಅವರು ಒತ್ತಡದ ಪರಿಣಾಮ ನಿಧನ ಹೊಂದಿದ ಮಾಹಿತಿ ಲಭ್ಯವಾಗುತ್ತಿದೆ, ಯಾವನೋ ಒಬ್ಬ ಕಂಟ್ರ್ಯಾಕ್ಟರ್ ಅವರ ಮನೆಯಲ್ಲಿ 42 ಕೋಟಿ ರೂ. ತಂದಿಟ್ಟು, ಸಿಕ್ಹಾಕಿಕೊಂಡರೆ ನೀವೇ ಕಾರಣರಾಗುತ್ತೀರಿ ಅಂತೆಲ್ಲ ಒತ್ತಡ ಹಾಕಿದ್ದನಂತೆ, ಆ ಒತ್ತಡ ತಾಳಲಾರದದೆ ಅವರು ಎದೆಯೊಡೆದು ಸತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ ಎಂದು ಅಶೋಕ್ ಹೇಳಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ