Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡವ ಮತ್ತು ರೈತ ವಿರೋಧಿ ಸಿದ್ದರಾಮಯ್ಯ ಸರ್ಕಾರಕ್ಕೆ ಅಧಿವೇಶನದಲ್ಲಿ ಕಾದಿದೆ ಶಾಸ್ತಿ: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಈಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಮಾಧ್ಯಮಳೊಂದಿಗೆ ಮಾತಾಡುವಾಗ ಆಥವಾ ಹೇಳಿಕೆಗಳನ್ನು ನೀಡುವಾಗ ಭಾಷೆಯ ಮರ್ಯಾದೆಯನ್ನು ಕಡೆಗಾಣಿಸುತ್ತಿರುವುದು ಕನ್ನಡಿಗರ ಗಮನಕ್ಕೆ ಬರುತ್ತಿದೆ. ಇವತ್ತು ಸವಳಂಗಾದಲ್ಲಿ ಅವರು ಸರ್ಕಾರದ ಸೊಕ್ಕು ಮುರಿಯುತ್ತೇವೆ ಅಂತ ಹೇಳಿದರು. ಅದರಲ್ಲ್ಲಿ ತಪ್ಪೇನು ಇಲ್ಲ ಮತ್ತು ಪದ ಅಸಂಸದೀಯವೂ ಅಲ್ಲ. ಆದರೆ ಅಂಥ ಪದ ಬಳಸದೆಯೂ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಬಿಎಸ್ ಯಡಿಯೂರಪ್ಪ ಎಷ್ಟೇ ಆವೇಶದಲ್ಲಿದ್ದರೂ ಸಭ್ಯ ಪದಗಳನ್ನು ಬಳಸುತ್ತಿದ್ದರು.

Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 30, 2023 | 1:49 PM

ದಾವಣಗೆರೆ: ನಿನ್ನೆ ಶಿವಮೊಗ್ಗ ಜಿಲ್ಲೆ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಇವತ್ತು ದಾವಣಗರೆ ಜಿಲ್ಲೆಯಲ್ಲಿದ್ದಾರೆ. ಜಿಲ್ಲೆಯ ಸವಳಂಗದಲ್ಲಿ (Savalanga) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ (Belagavi Assembly Session) ರಾಜ್ಯ ಸರ್ಕಾರದ ವೈಫಲ್ಯಗಳನ್ನೆಲ್ಲ ಹೊರಹಾಕುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ, ರೈತರು, ಕಬ್ಬುಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸರ್ಕಾರ ರೈತ ವಿರೋಧಿ ಮತ್ತು ಬಡವರ ವಿರೋಧಿ ಅನ್ನೋದು ಸಾಬೀತಾಗಿದೆ ಎಂದು ವಿಜಯೇಂದ್ರ ಹೇಳಿದರು. ಉತ್ತರ ಕರ್ನಾಟಕದಲ್ಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ, ಸರ್ಕಾರ ಅಭಿವೃದ್ಧಿ ಕಾರ್ಯಗಳಿಗಾಗಿ ಶಾಸಕರಿಗೆ ಅನುದಾನ ಬಿಡುಗಡೆ ಮಾಡದೆ ವಂಚಿಸುತ್ತಿದೆ, ಕಾಂತರಾಜ್ ವರದಿಯನ್ನು ನಿರ್ಲಕ್ಷಿಸಿದೆ ಎಂದು ಹೇಳಿದ ಅವರು ಅಧಿವೇಶನದಲ್ಲಿ ಸರ್ಕಾರದ ಸೊಕ್ಕು ಮುರಿಯುತ್ತೇವೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ