ಲೋಕಸಭಾ ಗೆಲುವಿಗಾಗಿ ದೇವರ ಮೊರೆ ಹೋದ ಶ್ರೀರಾಮುಲು, ಈಶ್ವರಪ್ಪ

|

Updated on: May 20, 2024 | 2:52 PM

ಬಳ್ಳಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಗೆಲುವಿಗಾಗಿ ಕಾಳಹಸ್ತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ದೇವಾಲಯದಲ್ಲಿ ಶ್ರೀರಾಮುಲು ಅವರು ಈಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬಳ್ಳಾರಿ, ಮೇ.20: ಲೋಕಸಭಾ ಚುನಾವಣೆ (Lok Sabha Election) ಫಲಿತಾಂಶಕ್ಕೆ ದಿನ ಗಣನೆ ಶುರುವಾಗುತ್ತಿದ್ದಂತೆ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಇಷ್ಟು ದಿನ ಗೆಲುವಿಗಾಗಿ ಜನರ ಮೊರೆ ಹೋಗಿದ್ದ ಅಭ್ಯರ್ಥಿಗಳು ಈಗ ಗೆಲುವು ದೊರಕಿಸಿಕೊಡುವಂತೆ ದೇವರ ಮೊರೆ ಹೋಗ್ತಿದ್ದಾರೆ. ಬಳ್ಳಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು (Sriramulu) ಅವರು ಗೆಲುವಿಗಾಗಿ ಕಾಳಹಸ್ತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ದೇವಾಲಯದಲ್ಲಿ ಶ್ರೀರಾಮುಲು ಅವರು ಈಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಾಡು ಇಲ್ಲವೇ ಮಡಿ ಎನ್ನುವ ರಾಜಕೀಯ ಹೋರಾಟದಲ್ಲಿರುವ ಶ್ರೀರಾಮುಲು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ. ಇನ್ನು ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಇಳಿದಿರುವ ಕೆ.ಎಸ್​.ಈಶ್ವರಪ್ಪನವರು ಕೂಡ ದೇವರ ಮೊರೆ ಹೋಗಿದ್ದಾರೆ. ದೇವಾಲಯದಲ್ಲಿ ಶಿವಲಿಂಗದ ಮುಂದೆ ಕುಟುಂಬ ಸಮೇತ ದೇವರ ಹಾಡು ಹಾಡಿ ದೇವರಿಗೆ ತಾನು ಬೇಡಿದ ವರ ನೀಡುವಂತೆ ಪ್ರಾರ್ಥಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on