Video: ರಷ್ಯಾದ ಸೋವಿಯತ್-ಇರಾ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ, ಓರ್ವ ಸಾವು

Updated on: Dec 11, 2025 | 9:19 AM

ರಷ್ಯಾದ ಸೇಂಟ್ ಪೀಟರ್ಸ್​​ಬರ್ಗ್​ನ ಒಳಾಂಗಣ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ನಿರತರಾಗಿದ್ದರು, ಸೇಂಟ್ ಪೀಟರ್ಸ್‌ಬರ್ಗ್‌ನ ನೆವ್ಸ್ಕಿ ಜಿಲ್ಲೆಯ ಪ್ರಾವೊಬೆರೆಜ್ನಿ ಮಾರುಕಟ್ಟೆಯಿಂದ ಸುಮಾರು 100 ಜನರನ್ನು ಸ್ಥಳಾಂತರಿಸಲಾಗಿದೆ. ಐತಿಹಾಸಿಕ ಸೋವಿಯತ್ ಇರಾ ಸಂಕೀರ್ಣದ ಅಂದಾಜು 1,500 ಚದರ ಮೀಟರ್, ಅಲ್ಲಿನ ಛಾವಣಿಯ ಮೂಲಕ ಬೆಂಕಿಯ ಜ್ವಾಲೆ ಮುಗಿಲೆತ್ತರಕ್ಕೆ ಹಾರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ರಷ್ಯಾ, ಡಿಸೆಂಬರ್ 11: ರಷ್ಯಾದ ಸೇಂಟ್ ಪೀಟರ್ಸ್​​ಬರ್ಗ್​ನ ಒಳ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ನಿರತರಾಗಿದ್ದರು, ಸೇಂಟ್ ಪೀಟರ್ಸ್‌ಬರ್ಗ್‌ನ ನೆವ್ಸ್ಕಿ ಜಿಲ್ಲೆಯ ಪ್ರಾವೊಬೆರೆಜ್ನಿ ಮಾರುಕಟ್ಟೆಯಿಂದ ಸುಮಾರು 100 ಜನರನ್ನು ಸ್ಥಳಾಂತರಿಸಲಾಗಿದೆ.
ಐತಿಹಾಸಿಕ ಸೋವಿಯತ್ ಇರಾ ಸಂಕೀರ್ಣದ ಅಂದಾಜು 1,500 ಚದರ ಮೀಟರ್, ಅಲ್ಲಿನ ಛಾವಣಿಯ ಮೂಲಕ ಬೆಂಕಿಯ ಜ್ವಾಲೆ ಮುಗಿಲೆತ್ತರಕ್ಕೆ ಹಾರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಉಲಿಟ್ಸಾ ಡೈಬೆಂಕೊದಲ್ಲಿರುವ ಎರಡು ಅಂತಸ್ತಿನ ಮಾರುಕಟ್ಟೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕ್ರಿಸ್​ಮಸ್ ಸಮಯವಾಗಿರುವುದರಿಂದ ಪಟಾಕಿಗಳಂತಹ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ಬೆಂಕಿಗೆ ಕಾರಣವೇನು ಅಥವಾ ಯಾವುದೇ ಸುರಕ್ಷತಾ ಉಲ್ಲಂಘನೆಗಳು ಕಟ್ಟಡದಾದ್ಯಂತ ಬೆಂಕಿ ವೇಗವಾಗಿ ಹರಡಲು ಕಾರಣವಾಗಿವೆಯೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Dec 11, 2025 09:17 AM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More