ತಾನಿನ್ನೂ ಬಿಜೆಪಿ ಶಾಸಕನೆಂದು ಹೇಳುವ ಸೋಮಶೇಖರ್ ಅವರಲ್ಲಿ ಪಕ್ಷದ ಬಗ್ಗೆ ಅಸಮಾಧಾನ ಮಡುಗಟ್ಟಿದೆ!
ಆದರೆ ಕ್ರಮೇಣ ತಮ್ಮನ್ನು ಹೊರಗಿನವನಂತೆ ಪರಿಗಣಿಸುವುದು ಶುರುವಾಯಿತು, ಚುನಾವಣೆಗೆ ಮೊದಲು ಮತ್ತು ನಂತರ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ, ವಾಪಸ್ಸು ಕಾಂಗ್ರೆಸ್ ಹೋಗುತ್ತಾನೆ ಅಂತ ಸುಳ್ಳು ಹರಿಬಿಡಲಾಗುತ್ತಿತ್ತು ಮತ್ತು ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿತ್ತು ಎಂದು ಸೋಮಶೇಖರ್ ಹೇಳಿದರು.
ಬೆಂಗಳೂರು: ಬಿಜೆಪಿ ಶಾಸಕರದ ಎಸ್ ಟಿ ಸೋಮಶೇಖರ್ (ST Somashekhar) ಮತ್ತು ಶಿವರಾಂ ಹೆಬ್ಬಾರ್ (Shivaram Hebbar) ಪಕ್ಷ ತೊರೆದು ಕಾಂಗ್ರೆಸ್ ಸೇರುವುದು ಕ್ರಮೇಣವಾಗಿ ಖಚಿತವಾಗುತ್ತಿದೆ. ಅವರಿಬ್ಬರು ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದರು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದ ಸೋಮಶೇಖರ್ ತಾವು ಈಗಲೂ ಬಿಜೆಪಿ ಶಾಸಕ ಅಂತ ಹೇಳುತ್ತಾರಾದರೂ, ಪಕ್ಷ ಮತ್ತು ಅದರ ನಾಯಕರ ವಿರುದ್ಧ ಕೇವಲ ಅಸಮಾಧಾನ ಮಾತ್ರ ಹೊರಹಾಕುತ್ತಾರೆ. ಬಿಜೆಪಿ ಸೇರಿದಾಗ ವಾತಾವರಣ ತಿಳಿ ಮತ್ತು ಸಹ್ಯವಾಗಿತ್ತು. ಆದರೆ ಕ್ರಮೇಣ ತಮ್ಮನ್ನು ಹೊರಗಿನವನಂತೆ ಪರಿಗಣಿಸುವುದು ಶುರುವಾಯಿತು, ಚುನಾವಣೆಗೆ ಮೊದಲು ಮತ್ತು ನಂತರ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ, ವಾಪಸ್ಸು ಕಾಂಗ್ರೆಸ್ ಹೋಗುತ್ತಾನೆ ಅಂತ ಸುಳ್ಳು ಹರಿಬಿಡಲಾಗುತ್ತಿತ್ತು ಮತ್ತು ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿತ್ತು ಎಂದು ಸೋಮಶೇಖರ್ ಹೇಳಿದರು. ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಬಗ್ಗೆಯೂ ಸೋಮಶೇಖರ್ ಅಸಮಾಧಾನ ಹೊರಹಾಕಿದರು. ಅವರು ಬಗ್ಗೆ ಮೊನ್ನೆ ಹಾವೇರಿಯಲ್ಲಿ ಬಿಸಿ ಪಾಟೀಲ್ ಹೇಳಿರೋದು ಸತ್ಯ ಎಂದು ಸೋಮಶೇಖರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ