ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ: ಆತಂಕ ದೂರ ಮಾಡಲು ದೈವದ ಮೊರೆಹೋದ ಹೊಟೇಲ್ ಆಡಳಿತ ಮಂಡಳಿ

| Updated By: Rakesh Nayak Manchi

Updated on: Jul 08, 2022 | 2:59 PM

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆಯಿಂದಾಗಿ ಹೊಟೇಲ್ ಸಿಬ್ಬಂದಿಗಳು ಆತಂಕಕ್ಕೀಡಾದ ಹಿನ್ನೆಲೆ ದಿ ಪ್ರೆಸಿಡೆಂಟ್​ ಹೋಟೆಲ್ ಆಡಳಿತ ಮಂಡಳಿ ಸುದರ್ಶನ ಹೋಮ ನಡೆಸಿದೆ. ಇದರ ವಿಡಿಯೋ ಇಲ್ಲಿದೆ ನೋಡಿ.

ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆದ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ ಸಂಬಂಧ ಹೊಟೇಲ್ ಆಡಳಿತ ಮಂಡಳಿಯು ದೈವದ ಮೊರೆಹೋಗಿದೆ. ಗುರೂಜಿ ಹತ್ಯೆಯಿಂದ ಹೊಟೇಲ್ ಸಿಬ್ಬಂದಿಗಳು ಆತಂಕಕ್ಕೀಡಾಗಿದ್ದು, ಭಯ ದೂರಮಾಡಲು, ಹೋಟೆಲ್ ಶುದ್ಧಗೊಳಿಸಲು ಗುರೂಜಿ ಕೊಲೆ ನಡೆದ ಸ್ಥಳದಲ್ಲಿ ಪುರೋಹಿತರಿಂದ ಸುದರ್ಶನ ಹೋಮ ನೆರವೇರಿಸಲಾಗಿದೆ. ಆ ಮೂಲಕ ದಿ ಪ್ರೆಸಿಡೆಂಟ್​ ಹೋಟೆಲ್​ಗೆ ಅಂಟಿದ ಕಳಂಕವನ್ನು ದೂರ ಮಾಡಲು ಹೊಟೇಲ್ ಆಡಳಿತ ಮಂಡಳಿ ಯತ್ನಿಸಿದೆ.

ಇದನ್ನೂ ಓದಿ: ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ; ಕೊಲೆಗೆ ಕಾರಣ ತಿಳಿಸಿದ ಆರೋಪಿಗಳು

Published on: Jul 08, 2022 02:59 PM