ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ; ವಿಡಿಯೋ ಇಲ್ಲಿದೆ

|

Updated on: Dec 20, 2024 | 7:26 PM

ಪಂಡಿತ್ ಪ್ರದೀಪ್ ಮಿಶ್ರಾ ಅವರ ಕಥಾದ 6ನೇ ದಿನದಂದು ಕಾಲ್ತುಳಿತ ಸಂಭವಿಸಿದೆ. ಇದರಿಂದಾಗಿ ಗೊಂದಲದಲ್ಲಿ ಸಿಲುಕಿದ ಅನೇಕ ಮಹಿಳೆಯರು ಮತ್ತು ವೃದ್ಧರಿಗೆ ಗಾಯಗಳಾಗಿವೆ. ಗುಂಪನ್ನು ನಿಯಂತ್ರಿಸಲು ಬೌನ್ಸರ್ ಪ್ರಯತ್ನಿಸಿದಾಗ ಗಲಾಟೆ ನಡೆದ ನಂತರ ಘಟನೆ ಪ್ರಾರಂಭವಾಯಿತು. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ಕಥಾವಾಚನಕ್ಕೆ ಹಾಜರಾಗುತ್ತಿದ್ದಾರೆ. ಕಾಲ್ತುಳಿತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿದರು.

ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಕಥಾವಾಚಕ ಪಂಡಿತ್ ಪ್ರದೀಪ್ ಮಿಶ್ರಾ ಅವರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನೂಕುನುಗ್ಗಲು ಉಂಟಾದ ಸನ್ನಿವೇಶವನ್ನು ತೋರಿಸುವ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಪಂಡಿತ್ ಪ್ರದೀಪ್ ಮಿಶ್ರಾ ಅವರ ಕಥಾದ 6ನೇ ದಿನದಂದು ಕಾಲ್ತುಳಿತ ಸಂಭವಿಸಿದೆ. ಇದರಿಂದಾಗಿ ಗೊಂದಲದಲ್ಲಿ ಸಿಲುಕಿದ ಅನೇಕ ಮಹಿಳೆಯರು ಮತ್ತು ವೃದ್ಧರಿಗೆ ಗಾಯಗಳಾಗಿವೆ. ಗುಂಪನ್ನು ನಿಯಂತ್ರಿಸಲು ಬೌನ್ಸರ್ ಪ್ರಯತ್ನಿಸಿದಾಗ ಗಲಾಟೆ ನಡೆದ ನಂತರ ಘಟನೆ ಪ್ರಾರಂಭವಾಯಿತು. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ಕಥಾವಾಚನಕ್ಕೆ ಹಾಜರಾಗುತ್ತಿದ್ದಾರೆ. ಕಾಲ್ತುಳಿತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ