Loading video

ಬಿಜೆಪಿ ಮುಖಂಡರ ಮಾತುಗಳನ್ನು ಪಕ್ಷದ ನಾಯಕತ್ವವೇ ಗಂಭೀರವಾಗಿ ಪರಿಗಣಿಸಲ್ಲ, ನಾನ್ಯಾಕೆ ಯೋಚಿಸಲಿ? ಪ್ರಿಯಾಂಕ್ ಖರ್ಗೆ

|

Updated on: Dec 30, 2024 | 5:04 PM

ಹಿರಿಯ ಬಿಜೆಪಿ ನಾಯಕ ಅನ್ವರ್ ಮಾಣಿಪ್ಪಾಡಿ, ವಿಜಯೇಂದ್ರ ವಿರುದ್ಧ 150 ಕೋಟಿ ರೂ. ಗಳ ಆರೋಪ ಮಾಡಿದರೂ ಅವರ ವಿರುದ್ಧ ಯಾರೂ ಚಕಾರವೆತ್ತಲ್ಲ, ಬಿಜೆಪಿ ನಾಯಕರು ನೀಡುವ ಹೇಳಿಕೆಗಳು ಮತ್ತು ಆಡುವ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಅವರು ಹೇಳೋದನ್ನು ತಾನ್ಯಾಕೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರು ಆಡುವ ಮಾತನ್ನು ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರೇ ಗಂಭೀರವಾಗಿ ಪರಿಗಣಿಸಲ್ಲ, ಮಾಧ್ಯಮದವರು ಯಾಕೆ ಪರಿಗಣಿಸುತ್ತಾರೋ ಗೊತ್ತಾಗುತ್ತಿಲ್ಲ, ಮುನಿರತ್ನ ಬಂಧನಕ್ಕೊಳಗಾಗಿದ್ದರೂ ಅವರಿಗೊಂದು ನೋಟೀಸ್ ಕೊಟ್ಟಿಲ್ಲ, ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ರಾಜ್ಯ ನಾಯಕತ್ವ ವಿರುದ್ಧ ಬಾಯಿಗೆ ಬಂದಂತೆ ಮಾತಾಡುತ್ತಾರೆ, ರೇಣುಕಾಚಾರ್ಯ ಅಷ್ಟೆಲ್ಲ ಕೂಗಾಡಿದರೂ ನೋಟೀಸಿಲ್ಲ, ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದರೂ ಒಂದೇ ಒಂದು ನೋಟೀಸ್ ಜಾರಿ ಮಾಡುವ ಯೋಗ್ಯತೆ ರಾಜ್ಯ ಬಿಜೆಪಿ ನಾಯಕತ್ವಕ್ಕಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್, ಗ್ಯಾಂಗ್‌ ವಿರುದ್ಧ ಕಬುರಗಿಯಲ್ಲಿ ಕೊನೆಗೂ ಎಫ್​ಐಆರ್ ದಾಖಲು