Loading video

ಆರ್ ಅಶೋಕ ದೆಹಲಿಗೆ ಹೋಗಿರುವ ಕಾರಣ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಗೊತ್ತಿಲ್ಲವೇ?

|

Updated on: Dec 04, 2024 | 11:29 AM

ಬಿಜೆಪಿ ಹಿರಿಯ ನಾಯಕ ಅರ್ ಅಶೋಕ ದೆಹಲಿಗೆ ಹೋಗಿದ್ದಾರೆ, ಅವರೇ ಹೋಗಿದ್ದಾರೋ ಅಥವಾ ಅವರನ್ನು ಕರೆಸಿಕೊಳ್ಳಲಾಗಿದಿಯೋ ಗೊತ್ತಿಲ್ಲ. ಯಾಕೆ ಹೋಗಿದ್ದು ಅಂತ ವಿಜಯೇಂದ್ರರನ್ನು ಕೇಳಿದರೆ, ಅಶೋಕ ವಿರೋಧ ಪಕ್ಷದ ನಾಯಕರಾಗಿದ್ದಾರೆ, ಯಾವುದಾದರು ಕೆಲಸದ ನಿಮಿತ್ತ ಹೋಗಿರುತ್ತಾರೆ ಎಂದು ಹೇಳಿದರು.

ಕಲಬುರಗಿ: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಿಷಯವನ್ನು ಬೆಂಗಳೂರಲ್ಲಿ ಡಿಸೆಂಬರ್ 7ರಂದು ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ಎಲ್ಲರಿಗೂ ಗೊತ್ತಿರುವ ಹಾಗೆ ಸೋಮಶೇಖರ್ ಹೆಚ್ಚು ಸಮಯ ಕಾಂಗ್ರೆಸ್ ಪಾಳೆಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ ಮತ್ತು ಬಿಜೆಪಿ ನಾಯಕರ ವಿರುದ್ಧ ಸದಾ ಟೀಕೆಗಳನ್ನು ಮಾಡುತ್ತಿರುತ್ತಾರೆ. ಕಳೆದ ತಿಂಗಳು ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮಾತಾಡಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ವಿಜಯೇಂದ್ರ ವಿರುದ್ಧವೂ ನೋಟೀಸ್ ಜಾರಿಯಾಗಬೇಕು: ರಮೇಶ್ ಜಾರಕಿಹೊಳಿ