Yuva Brigade; ವೇಣುಗೋಪಾಲ್ ಪತ್ನಿಗೆ ರೂ. 25 ಲಕ್ಷ ಪರಿಹಾರ ಮತ್ತು ಸರ್ಕಾರೀ ಕೆಲಸವನ್ನು ಸರ್ಕಾರ ನೀಡಬೇಕು: ಡಾ ಸಿಎನ್ ಅಶ್ವಥ್ ನಾರಾಯಣ

|

Updated on: Jul 11, 2023 | 6:17 PM

ಸರ್ಕಾರ ನಿಷ್ಪಕ್ಷವಾದ ನಡೆಸಿ ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಗಲ್ಲು ಶಿಕ್ಷೆ ವಿಧಿಸವಂಥ ಕೆಲಸ ಆಗಬೇಕು ಎಂದ ಬಿಜೆಪಿ ಶಾಸಕ ಸಿಎನ್ ಆಶ್ವಥ್ ನಾರಾಯಣ ಹೇಳಿದರು.

ಮೈಸೂರು: ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ (Venugopal murder) ಒಂದು ಪೂರ್ವನಿಯೋಜಿತ ಕೃತ್ಯ, ಬರ್ಬರ ಹತ್ಯೆಯಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಗಳನ್ನು (influential people) ಉಳಿಸಲು ಪ್ರಕರಣವನ್ನು ಹತ್ತಿಕ್ಕುವ ಕೆಲಸಗಳು ನಡೆಯುತ್ತಿವೆ, ಸರ್ಕಾರ ನಿಷ್ಪಕ್ಷವಾದ ನಡೆಸಿ ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಗಲ್ಲು ಶಿಕ್ಷೆ ವಿಧಿಸವಂಥ ಕೆಲಸ ಆಗಬೇಕು ಎಂದ ಬಿಜೆಪಿ ಶಾಸಕ ಸಿಎನ್ ಆಶ್ವಥ್ ನಾರಾಯಣ (Dr CN Ashwath Narayan) ಹೇಳಿದರು. ವೇಣುಗೋಪಾಲ್ ಕುಟುಂಬಸ್ಥರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಚಿವ, ಹತ್ಯೆಗೀಡಾದ ವ್ಯಕ್ತಿ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರಿಂದ ಅವನ ಹೆಂಡತಿಗೆ ಒಂದು ಸರ್ಕಾರೀ ಕೆಲಸ ನೀಡಬೇಕು ಮತ್ತು ರೂ. 25 ಲಕ್ಷ ಕುಟುಂಬಕ್ಕೆ ಪರಿಹಾರ ಧನವಾಗಿ ನೀಡಬೇಕೆಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on