AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ಯೆಯಾದ ಯುವ ಬ್ರಿಗೇಡ್ ಕಾರ್ಯಕರ್ತನ ಕುಟುಂಬಕ್ಕೆ ಸಿಗದ ಪರಿಹಾರ; ಮೈಸೂರು ಡಿಸಿ ಹೇಳುವುದೇನು?

ಹತ್ಯೆಯಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್​ ಅವರ ಕುಟುಂಬಕ್ಕೆ ಅಂತ್ಯಸಂಸ್ಕಾರದ ನಂತರ ಇಂದು ಸಂಜೆ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ವೇಣುಗೋಪಾಲ್ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ.

ಹತ್ಯೆಯಾದ ಯುವ ಬ್ರಿಗೇಡ್ ಕಾರ್ಯಕರ್ತನ ಕುಟುಂಬಕ್ಕೆ ಸಿಗದ ಪರಿಹಾರ; ಮೈಸೂರು ಡಿಸಿ ಹೇಳುವುದೇನು?
ಹತ್ಯೆಯಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್
ರಾಮ್​, ಮೈಸೂರು
| Updated By: Rakesh Nayak Manchi|

Updated on: Jul 10, 2023 | 10:09 PM

Share

ಮೈಸೂರು: ಹತ್ಯೆಯಾದ ಯುವ ಬ್ರಿಗೇಡ್ (Yuva Brigade) ಕಾರ್ಯಕರ್ತ ವೇಣುಗೋಪಾಲ್​ ಅಂತ್ಯಸಂಸ್ಕಾರದ ನಂತರ ಸಂಜೆ ವೇಳೆಗೆ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ವೇಣುಗೋಪಾಲ್ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ. ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದ ಕುಟುಂಬಸ್ಥರಿಗೆ ಹಾಗೂ ಕಾರ್ಯಕರ್ತರಿಗೆ ಉಪವಿಭಾಗಾಧಿಕಾರಿ ನೀಡಿದ ಭರವಸೆ ಏನು? ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಹೇಳುವುದೇನು?

ಹತ್ಯೆಯಾದ ವೇಣುಗೋಪಾಲ್​ ಮೃತದೇಹವನ್ನು ಆಸ್ಪತ್ರೆ ಮುಂದಿಟ್ಟು ಪ್ರತಿಭಟನೆ ನಡೆಸಲಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿಯಲಾಗಿತ್ತು. ಆದರೆ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿ ರಕ್ಷಿತ್, ಅಂತ್ಯಕ್ರಿಯೆ ನಡೆಸಿ, ಇಂದು ಸಂಜೆಯೊಳಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.

ಈ ಬಗ್ಗೆ ಮಾತನಾಡಿದ್ದ ಆರ್​ಎಸ್​ಎಸ್ ಮುಖಂಡ ತೋಟದಪ್ಪ ಬಸವರಾಜು, ಅಟ್ರಾಸಿಟಿ ಪ್ರಕರಣದಡಿ 8.25 ಲಕ್ಷ ರೂ. ಶೀಘ್ರ ಪರಿಹಾರಕ್ಕೆ ಒಪ್ಪಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ಪರಿಹಾರ ಕೊಡಿಸುವ ಭರವಸೆ ಹಾಗೂ ಮೃತನ ಪತ್ನಿಗೆ ಕೆಲಸ ಹಾಗೂ ಪಿಂಚಣಿ ಭರವಸೆ ನೀಡಲಾಗಿದೆ. ಮೈಸೂರು ಜಿಲ್ಲಾಡಳಿತದ ಭರವಸೆಯಿಂದ ಶವ ಸಂಸ್ಕಾರಕ್ಕೆ ಒಪ್ಪಿದ್ದೇವೆ ಎಂದಿದ್ದರು. ಅದರಂತೆ, ಪ್ರತಿಭಟನೆ ಕೈಬಿಟ್ಟ ಕುಟುಂಬಸ್ಥರು ಹಾಗೂ ಕಾರ್ಯಕರ್ತರು ವೇಣುಗೋಪಾಲ್ ಅವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆದರೆ ಮೃತನ ಕುಟುಂಬಸ್ಥರಿಗೆ ಪರಿಹಾರ ಬಿಡುಗಡೆಯಾಗಿಲ್ಲ.

ಇದನ್ನು ಓದಿ: ಕಾಂಗ್ರೆಸ್​​ ಕಾರ್ಯಕರ್ತರು ಯುವ ಬ್ರಿಗೇಡ್ ಕಾರ್ಯಕರ್ತನನ್ನು ಹೊಡೆದಿದ್ದಾರೆ: ಚಕ್ರವರ್ತಿ ಸೂಲಿಬೆಲೆ ಆರೋಪ

ಮೈಸೂರು ಜಿಲ್ಲಾಧಿಕಾರಿ ಹೇಳುವುದೇನು?

ಪರಿಹಾರದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ, ಎಸ್​ಸಿ ಎಸ್​ಟಿ ಅಟ್ರಾಸಿಟಿ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದ್ದರೆ ಅದರ ಪರಿಹಾರ ಸಿಗಲಿದೆ. ಪ್ರಕರಣದಲ್ಲಿ ಆರೋಪಿಗಳು ಬೇರೆ ಸಮುದಾಯದವರಾಗಿದ್ದಾರೆ ಈ ಕಾಯ್ದೆ ಅನ್ವಯವಾಗುತ್ತದೆ. ಇದು ಪೊಲೀಸ್ ಎಫ್​ಐಆರ್‌ನಲ್ಲಿ ಉಲ್ಲೇಖವಾಗಿದ್ದರೆ ಸಮಾಜ ಕಲ್ಯಾಣ ಇಲಾಖೆಯಿಂದ ಒಟ್ಟು 8.25 ಲಕ್ಷ ಎರಡು ಹಂತದಲ್ಲಿ ಪರಿಹಾರ ಸಿಗಲಿದೆ ಎಂದರು.

ಎಫ್​​ಐಆರ್‌ನಲ್ಲಿ ಈ ವಿಚಾರ ನಮೂದಾದ ತಕ್ಷಣ ಪರಿಹಾರದ ಮೊತ್ತದ ಶೇ.50 ರಷ್ಟು ಪರಿಹಾರ ಅಂದರೆ 4.12 ಲಕ್ಷ ರೂ. ಪರಿಹಾರ ಕುಟುಂಬಕ್ಕೆ ಸಿಗಲಿದೆ. ಪ್ರಕರಣದ ತನಿಖೆ ನಡೆದು ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ ಅಪರಾಧ ಧೃಡವಾದರೆ ಉಳಿದ ಶೇ.50ರಷ್ಟು ಅಂದರೆ 4.12 ಲಕ್ಷ ಪರಿಹಾರ ಸಿಗಲಿದೆ ಎಂದರು.

ಚಾರ್ಜ್‌ಶೀಟ್ ನಂತರವೇ ಅನುಕಂಪದ ಆಧಾರದ ಮೇಲೆ ಕುಟುಂಬದ ಸದಸ್ಯರಿಗೆ ಕೆಲಸ ಹಾಗೂ ಕೆಲಸ ಸಿಗುವವರೆಗೂ ಪಿಂಚಣಿ ಸೌಲಭ್ಯ ಸಿಗಲಿದೆ. ಇದು ಎಸ್​ಸಿ ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಸಿಗಲಿದೆ. ಸಿಎಂ ಪರಿಹಾರ ನಿಧಿಯಿಂದ ಕುಟುಂಬಕ್ಕೆ ಪರಿಹಾರ ಸಿಗಬೇಕಾದರೆ ಸಂತ್ರಸ್ಥ ಕುಟುಂಬದವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಬೇಕು. ನಂತರ ಪ್ರಸ್ತಾಪನೆ ಸಲ್ಲಿಸಲಾಗುವುದು. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

25 ಲಕ್ಷಕ್ಕೆ ಅಂತಾ ಬರುದಿಲ್ಲ. ನಮ್ಮ ಕುಟುಂಬ ಸಮಸ್ಯೆಯಲ್ಲಿದೆ ಸರ್ಕಾರದಿಂದ ಸಹಾಯ ಮಾಡಿ ಅಂತಾ ಕುಟುಂಬದವರು ಮನವಿ ಸಲ್ಲಿಸಿದರೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ‌ ಕಳುಹಿಸುತ್ತಾರೆ. ಪರಿಹಾರ ಕೊಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಸಿಎಂ ಪರಿಹಾರವಾಗಿ 1 ಕೋಟಿಯಾದರೂ ಕೊಡಬಹುದು, 50 ಲಕ್ಷ, 25 ಲಕ್ಷ, 10 ಲಕ್ಷ, 5 ಲಕ್ಷ ಎಷ್ಟು ಬೇಕಾದರೂ ಕೊಡಬಹುದು. ಇಲ್ಲ ಕೊಡದೆಯೂ ಇರಬಹುದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್