Assembly Session: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲಿ ದಾಳಿ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್
ಬೇರೆ ಬಿಜೆಪಿ ಶಾಸಕರು ಯತ್ನಾಳ್ ನೆರವಿಗೆ ಧಾವಿಸಿದರೂ ಶಿವಕುಮಾರ್ ಒಂದೇ ಸಮನೆ ದಾಳಿ ನಡೆಸಿ ಕೂತುಕೊಂಡರು.
ಬೆಂಗಳೂರು: ವಿಧಾನ ಸಭೆಯಲ್ಲಿ ಇವತ್ತಿನ ಕಾರ್ಯಕಲಾಪ ಸದನವನ್ನು ಅಕ್ಷರಶಃ ರಣರಂಗ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ (Basanagouda Pati Yatnal) ಅವರು ವಿಜಯಪುರ ನಗರ ಸಭೆ ಅಯಕ್ತರ ವರ್ಗಾವಣೆಗೆ ಸಂಬಂಧಿಸಿದಂತೆ ಶುರುಮಾಡಿದ ಚರ್ಚೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ (Congress leaders) ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಯತ್ನಾಳ್ ವ್ಯಾಪಾರ, ಧಂದೆ ಮೊದಲಾದ ಪದಗಳನ್ನು ಬಳಸಿದ್ದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರನ್ನು (DK Shivakumar) ಯಾವಮಟ್ಟಿಗೆ ಕೆರಳಿಸಿತೆಂದರೆ ಅವರು ಬಿಜೆಪಿ ಶಾಸಕನ ಮೇಲೆ ಏಕವಚನದಲ್ಲಿ ದಾಳಿ ಶುರು ಮಾಡಿದರು. ವ್ಯಾಪಾರ ವಹಿವಾಟು ಅದೆಲ್ಲ ನಿಮಗೆ ಸಂಬಂಧಿಸಿದ್ದು, 2,500 ಕೋಟಿ ರೂ. ಕೊಟ್ಟಿದ್ದರೆ ನಾನೇ ಸಿಎಂ ಆಗ್ತಿದ್ದೆ ಅಂತ ನೀವೇ ಹೇಳಿದ್ದು, ನಿಮ್ಮಲ್ಲಿ ಎಲ್ಲ ಹುದ್ದೆಗಳಿಗೆ ದರ ಫಿಕ್ಸ್ ಆಗಿದೆ ಎಂದ ಶಿವಕುಮಾರ್; ಇಷ್ಟೆಲ್ಲ ಹೇಳಿದರೂ ಬಿಜೆಪಿ ನಿಮ್ಮನ್ನು ಇನ್ನೂ ಪಕ್ಷದಲ್ಲಿ ಇಟ್ಟುಕೊಂಡಿದೆಯಲ್ಲ, ನಾನಾಗಿದ್ದರೆ 24 ಗಂಟೆಯೊಳಗೆ ಪಕ್ಷದಿಂದ ಡಿಸ್ಮಿಸ್ ಮಾಡುತ್ತಿದ್ದೆ ಎಂದು ಕೋಪದಲ್ಲಿ ಭುಸುಗುಡುತ್ತಾ ಹೇಳಿದರು. ಬೇರೆ ಬಿಜೆಪಿ ಶಾಸಕರು ಯತ್ನಾಳ್ ನೆರವಿಗೆ ಧಾವಿಸಿದರೂ ಶಿವಕುಮಾರ್ ಒಂದೇ ಸಮನೆ ದಾಳಿ ನಡೆಸಿ ಕೂತುಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ