Assembly Session: ಸದನದಲ್ಲಿ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಬಸನಗೌಡ ಯತ್ನಾಳ್ ಮೇಲೆ ರೇಗಾಡಿದರು!
ಮುಖ್ಯಮಂತ್ರಿ ಕೋಪದಲ್ಲಿ ಕೂಗಾಡಿದಾಗ ಯತ್ನಾಳ್ ಮೆತ್ತಗಾಗಿ, ಅಲ್ರೀ, ಅಲ್ರಿ ಅನ್ನುತ್ತಾರೆ. ಕೆಲ ಬಿಜೆಪಿ ಸದಸ್ಯರು ಯತ್ನಾಳ್ ಅವರನ್ನು ಕೂತುಕೊಳ್ಳಲು ಹೇಳುತ್ತಾರೆ.
ಬೆಂಗಳೂರು: ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಡುವೆ ಹೆಚ್ಚುಕಡಿಮೆ ಪ್ರತಿದಿನ ವಾಗ್ವಾದಗಳು ನಡೆಯುತ್ತಿವೆ. ವಿಜಯಪುರ ನಗರಸಭೆ ಆಯುಕ್ತರ ವರ್ಗಾವಣೆಗೆ ಸಂಬಂಧಿಸಿದಂತೆ ಯತ್ನಾಳ್ ಮತ್ತು ಭೈರತಿ ಸುರೇಶ್ (Byrathi Suresh) ನಡುವೆ ಹಲವು ಸುತ್ತಿನ ವಾಕ್ಸಮರ ನಡೆಯುತ್ತಿದ್ದಾಗಲೇ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಳ್ಳಲಾರಂಭಿಸಿದ್ದರು. ಬಿಜೆಪಿ ಶಾಸಕ ವ್ಯಾಪಾರ ಅಂತ ಶಬ್ದ ಬಳಸಿದಾಗ ಮುಖ್ಯಮಂತ್ರಿ ಎದ್ದು ನಿಂತು ಶಾಸಕನನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು. ಸದನದಲ್ಲಿ ನೀವು ಹರಿಶ್ಚಂದ್ರ ಬೇರೆಯವರು ಸುಳ್ಳುಗಾರರಾ? ಒಬ್ಬ ಹಿರಿಯ ಸದಸ್ಯನಾಗಿರುವ ನಿಮಗೆ ಶೂನ್ಯವೇಳೆಯಲ್ಲಿ ಯಾವುದನ್ನು ಚರ್ಚಿಸಬೇಕು ಯಾವುದನ್ನು ಚರ್ಚಿಸಬಾರದು ಅನ್ನೋದು ನಿಮಗೆ ಗೊತ್ತಿಲ್ಲವೇ? ಗೊತ್ತಿಲ್ಲವಾದರೆ ನಿಯಾಮಾವಳಿ ಪುಸ್ತಕ ತೆಗೆದು ಓದಿಕೊಳ್ಳಿ ಅಂತ ಮುಖ್ಯಮಂತ್ರಿ ಕೋಪದಲ್ಲಿ ಕೂಗಾಡಿದಾಗ ಯತ್ನಾಳ್ ಮೆತ್ತಗಾಗಿ, ಅಲ್ರೀ, ಅಲ್ರಿ ಅನ್ನುತ್ತಾರೆ. ಕೆಲ ಬಿಜೆಪಿ ಸದಸ್ಯರು ಯತ್ನಾಳ್ ಅವರನ್ನು ಕೂತುಕೊಳ್ಳಲು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ