ಮಾಧ್ಯಮವರಿದ್ದಲ್ಲಿಗೆ ಓಡುತ್ತಿದ್ದ ಜಮೀರ್ ಅಹ್ಮದ್ ಈಗ ಅವರನ್ನು ಕಂಡೊಡನೆ ದೂರ ಓಡುತ್ತಿದ್ದಾರೆ!
ದಾವಣಗೆರೆಯ (Davanagere) ಹೋಟೆಲೊಂದರ ಬಳಿ ಮಾಧ್ಯಮದವರು ಪ್ರಶ್ನೆ ಕೇಳಲು ಹೋದಾಗ ಜಮೀರ್ ‘ಆಮೇಲೆ ಆಮೇಲೆ‘ ಅನ್ನುತ್ತಾ ಅವರಿಂದ ತಪ್ಪಿಸಿಕೊಂಡು ಓಡಿದರು.
ದಾವಣಗೆರೆ: ಮಾಧ್ಯಮದವರಿದ್ದಲ್ಲಿಗೆ ಹೋಗಿ ಹೇಳಿಕೆ ನೀಡುವುದನ್ನು ಆರಂಭಿಸಿದ್ದ ಕಾಂಗ್ರೆಸ್ ಪಕ್ಷದ ಬಾಯಿಬಡುಕ ಶಾಸಕ ಜಮೀರ್ ಅಹ್ಮದ್ (Zameer Ahmed) ಅವರಿಗೆ ಇವತ್ತು ಅವರನ್ನು ಕಂಡು ಓಟಕಿತ್ತುವ ಸ್ಥಿತಿ ಎದುರಾಗಿದೆ. ಎಐಸಿಸಿ (AICC) ನೋಟೀಸ ಮೂಲಕ ನೀಡಿರುವ ಚುರುಕು ಕೊಂಡ ಜಾಸ್ತಿಯೇ ತಾಕಿದಂತಿದೆ ಮಾರಾಯ್ರೇ. ಮಂಗಳವಾರ ದಾವಣಗೆರೆಯ (Davanagere) ಹೋಟೆಲೊಂದರ ಬಳಿ ಮಾಧ್ಯಮದವರು ಪ್ರಶ್ನೆ ಕೇಳಲು ಹೋದಾಗ ಜಮೀರ್ ‘ಆಮೇಲೆ ಆಮೇಲೆ‘ ಅನ್ನುತ್ತಾ ಅವರಿಂದ ತಪ್ಪಿಸಿಕೊಂಡು ಓಡಿದರು. ಸೋಮವಾರ ತನಗೆ ಯಾವುದೇ ನೋಟಿಸ್ ಬಂದಿಲ್ಲ ಅಂತ ಅವರು ಹೇಳಿದ್ದರು.