ಎಐಸಿಸಿ ನೋಟೀಸ್ ಜಮೀರ್ ಅಹ್ಮದ್​ಗೆ ಇವತ್ತು ಕೂಡ ಸಿಕ್ಕಿಲ್ಲವಂತೆ!

ಎಐಸಿಸಿ ನೋಟೀಸ್ ಜಮೀರ್ ಅಹ್ಮದ್​ಗೆ ಇವತ್ತು ಕೂಡ ಸಿಕ್ಕಿಲ್ಲವಂತೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2022 | 1:29 PM

ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ತಾನು ಎರಡು ದಿನಗಳಿಂದ ಪ್ರವಾಸದಲ್ಲಿರುವ ಕಾರಣ ಅದು ಸಿಕ್ಕಲ್ಲ ಎಂದು ಹೇಳಿದರು

ದಾವಣಗೆರೆ: ಎಐಸಿಸಿಯ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಕಳಿಸಿರುವ ನೋಟೀಸ್ ಮತ್ತು ಅದರಲ್ಲಿ ಅಡಕವಾಗಿರುವ ಅಂಶ ಬೇರೆ ಗ್ರಹಗಳಲ್ಲಿರುವ ಜೀವಿಗಳಿಗೆ ಗೊತ್ತಾದರೂ ತನಗಿನ್ನೂ ಅದು ಸಿಕ್ಕೇ ಇಲ್ಲವೆಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಸಾಧಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ತಾನು ಎರಡು ದಿನಗಳಿಂದ ಪ್ರವಾಸದಲ್ಲಿರುವ ಕಾರಣ ಅದು ಸಿಕ್ಕಲ್ಲ ಎಂದು ಹೇಳಿದರು. ಅದನ್ನು ಮೇಲ್ ಮಾಡಲಾಗಿದೆಯೋ ಅಥವಾ ಅಂಚೆ ಮೂಲಕ ಕಳಿಸಿದ್ದಾರೋ ಅಂತ ನಮಗೆ ಗೊತ್ತಾಗುತ್ತಿಲ್ಲ ಮಾರಾಯ್ರೇ.