ದೆಹಲಿ ಪೊಲೀಸರೊಂದಿಗೆ ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ ಮತ್ತೇ ತಿಕ್ಕಾಟ!

ದೆಹಲಿ ಪೊಲೀಸರೊಂದಿಗೆ ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ ಮತ್ತೇ ತಿಕ್ಕಾಟ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2022 | 2:30 PM

ಪ್ರತಿಭಟನೆಕಾರರು ಬ್ಯಾರಿಕೇಡ್ ಗಳನ್ನು ತಳ್ಳಲಾರಂಭಿಸಿದಾಗ ಪೊಲೀಸರು ಶ್ರೀನಿವಾಸ ಸೇರಿದಂತೆ ಇತರ ಕೆಲವರನ್ನು ಎಳೆದೊಯ್ಯುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದು.

ದೆಹಲಿ: ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಅವರ ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ (BV Srinivas) ನೇತೃತ್ವದಲ್ಲಿ ಕಾರ್ಯಕರ್ತರು ದೆಹಲಿಯಲ್ಲಿ (Delhi) ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆಕಾರರು ಬ್ಯಾರಿಕೇಡ್ ಗಳನ್ನು (barricade) ತಳ್ಳಲಾರಂಭಿಸಿದಾಗ ಪೊಲೀಸರು ಶ್ರೀನಿವಾಸ ಸೇರಿದಂತೆ ಇತರ ಕೆಲವರನ್ನು ಎಳೆದೊಯ್ಯುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದು.