Video: ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಲಾರೆನ್ ಪೊವೆಲ್

|

Updated on: Jan 12, 2025 | 12:55 PM

ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್​ ಪತ್ನಿ ಲಾರೆನ್ ಪೊವೆಲ್ ಕುಂಭಮೇಳಕ್ಕಾಗಿ ಪ್ರಯಾಗ್​ರಾಜ್​ಗೆ ತೆರಳುವ ಮೊದಲು ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದರು. ಲಾರೆನ್ಸ್ ನಿರಂಜನಿ ಅಖಾರದ ಸ್ವಾಮಿ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರೊಂದಿಗೆ ದೇವಸ್ಥಾನಕ್ಕೆ ಬಂದರು. ಭಾರತೀಯ ಉಡುಪನ್ನು ಧರಿಸಿ ಬಂದಿದ್ದ ಲಾರೆನ್ ವಿಶ್ವನಾಥ ದೇವಾಲಯದಲ್ಲಿ ಗರ್ಭಗುಡಿಯ ಹೊರಗಿನಿಂದ ಪ್ರಾರ್ಥನೆ ಸಲ್ಲಿಸಿದರು

ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್​ ಪತ್ನಿ ಲಾರೆನ್ ಪೊವೆಲ್ ಕುಂಭಮೇಳಕ್ಕಾಗಿ ಪ್ರಯಾಗ್​ರಾಜ್​ಗೆ ತೆರಳುವ ಮೊದಲು ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದರು. ಲಾರೆನ್ಸ್ ನಿರಂಜನಿ ಅಖಾರದ ಸ್ವಾಮಿ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರೊಂದಿಗೆ ದೇವಸ್ಥಾನಕ್ಕೆ ಬಂದರು.

ಭಾರತೀಯ ಉಡುಪನ್ನು ಧರಿಸಿ ಬಂದಿದ್ದ ಲಾರೆನ್ ವಿಶ್ವನಾಥ ದೇವಾಲಯದಲ್ಲಿ ಗರ್ಭಗುಡಿಯ ಹೊರಗಿನಿಂದ ಪ್ರಾರ್ಥನೆ ಸಲ್ಲಿಸಿದರು.

ಭಾರತೀಯ ಸಂಪ್ರದಾಯದಂತೆ, ಕಾಶಿ ವಿಶ್ವನಾಥದಲ್ಲಿ, ಬೇರೆ ಯಾವುದೇ ಸಮುದಾಯದವರು ಶಿವಲಿಂಗವನ್ನು ಮುಟ್ಟುವಂತಿಲ್ಲ. ಅದಕ್ಕಾಗಿಯೇ ಶಿವಲಿಂಗವನ್ನು ಹೊರಗಿನಿಂದ ನೋಡುವ ವ್ಯವಸ್ಥೆ ಮಾಡಲಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ