BBMP survey for castration: ಬೀದಿನಾಯಿಗಳ ಉಪಟಳಕ್ಕೆ ಬೆಂಗಳೂರಿಗರು ಗಢಗಢ ನಡುಗುತ್ತಿದ್ದಾರೆ, ಬಿಬಿಎಂಪಿ ನಾಯಿಗಳ ಲೆಕ್ಕ ಹಾಕುತ್ತಿದೆ!

| Updated By: ಸಾಧು ಶ್ರೀನಾಥ್​

Updated on: Jul 21, 2023 | 7:41 PM

ಬೀದಿನಾಯಿಗಳ ಈ ಉಪಟಳಕ್ಕೆ ಬೆಂಗಳೂರಿಗರು ಬೆದರಿ ಹೋಗಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿರೋ ಈ ಸಂತತಿಯ ವೇಗ ಕಡಿಮೆ ಮಾಡಲು ಬಿಬಿಎಂಪಿ ಮುಂದಾಗಿದೆ.

BBMP survey for castration of Stray Dogs: ಪಾರ್ಕ್ ನಲ್ಲೂ ನಾಯಿ ಕಾಟ.. ಬೀದಿಯಲ್ಲೂ ಶ್ವಾನಗಳ ಹಾವಾಳಿ. ಬೀದಿನಾಯಿಗಳ ಈ ಉಪಟಳಕ್ಕೆ ಬೆಂಗಳೂರಿಗರು ಬೆದರಿ ಹೋಗಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿರೋ ಈ ಸಂತತಿಯ ವೇಗ ಕಡಿಮೆ ಮಾಡಲು ಪಾಲಿಕೆ ಮುಂದಾಗಿದೆ. ಈಗಾಗಲೇ ನಾಯಿಗಣತಿ ಆರಂಭ ಆಗಿದ್ದು, ಗಣತಿ ಬಳಿಕ ಸಂತಾನಶಕ್ತಿ ಹರಣ (castration) ಶುರುವಾಗಿದೆ.

ಒಟ್ಟು 50 ಟೀಮ್​​ಗಳನ್ನು ಮಾಡಲಾಗಿದ್ದು ಒಂದು ಟೀಮ್‌ನಲ್ಲಿ ಇಬ್ಬರು ಸಮೀಕ್ಷಾದಾರರು ಇದ್ದು, ಮೇಲ್ವಿಚಾರಣೆಗಾಗಿ 15 ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ. ಈ ಹಿಂದೆ 2019 ರಲ್ಲಿ ಸಮೀಕ್ಷೆ ಮಾಡಿ ಸಂತಾನಹರಣ ಚಿಕಿತ್ಸೆ ನೀಡಿದ್ದು, ಈ ಕಾರ್ಯಕ್ರಮ ಯಶಸ್ವಿ ಅನುಷ್ಟಾನದ ಬಗ್ಗೆ ತಿಳಿಯುವ ಸಲುವಾಗಿ ಬೀದಿನಾಯಿಗಳ ಸಮೀಕ್ಷೆಯ ಕಾರ್ಯ ಪ್ರಾರಂಭವಾಗಿದೆ. 2019 ನೇ ಸಾಲಿನಲ್ಲಿ ಬಿಬಿಎಂಪಿಯಿಂದ ನಡೆದ ಸಮೀಕ್ಷೆಯಲ್ಲಿ ಸುಮಾರು 3.10 ಲಕ್ಷ ಬೀದಿ ನಾಯಿಗಳಿವೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೀದಿ ನಾಯಿಗಳ ನಿಯಂತ್ರಣ ಹಾಗೂ ರೇಬಿಸ್ ರೋಗ ತಡೆಗಟ್ಟಲು ಬಿಬಿಎಂಪಿ (BBMP) ವ್ಯಾಪ್ತಿಯ ಎಂಟು ವಲಯಗಳಲ್ಲಿ ಬೀದಿ‌ ನಾಯಿಗಳ ಸಮೀಕ್ಷೆಗೆ ಪಶುಪಾಲನಾ ವಿಭಾಗ ಮುಂದಾಗಿದೆ. ಬಿಬಿಎಂಪಿ WVS ಸರ್ವೆ 2023 ಮೊಬೈಲ್ ಆ್ಯಪ್ ಮೂಲಕ ಬೀದಿ ನಾಯಿ ಸಮೀಕ್ಷೆ ನಡೆಸಲಾಗುತ್ತದೆ. ಸಮೀಕ್ಷೆ ನಂತರ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕೆ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ಅಪ್ಲೋಡ್ ಮಾಡಲಾಗುತ್ತದೆ.

Follow us on