ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ! ವಿಡಿಯೋ ವೈರಲ್!

Edited By:

Updated on: Aug 19, 2026 | 3:45 PM

ಏ ಯಾರಲ್ಲಿ ಟಿಕೆಟ್... ಸರ್ಕಾರಿ ಶಾಲೆಯ ವಿದ್ಯಾರ್ಥಿ, ಸಾರಿಗೆ ಬಸ್‌ನಲ್ಲಿ ಕಂಡಕ್ಟರ್ ಆಗಿ ಪ್ರಯಾಣಿಕರಿಗೆ ಟಿಕೆಟ್ ನೀಡಿದ ವಿಡಿಯೋ ವೈರಲ್ ಆಗಿದೆ. ಕಲಬುರಗಿಯ ಸಿಟಿ ಬಸ್ ನಿಲ್ದಾಣದಿಂದ ಕಾಳಗಿ ಕಡೆಗೆ ಚಲಿಸುವ ಕೆಕೆಆರ್ ಟಿಸಿ ಬಸ್ ಕಂಡಕ್ಟರ್, ವಿದ್ಯಾರ್ಥಿಗೆ ಟಿಕೆಟ್ ವಿತರಿಸುವ ಕೆಲಸ ನೀಡಿದ್ದಾರೆ. ಕಾಳಗಿ ತಾಲ್ಲೂಕಿನ ಡಿಪೋಗೆ ಸೇರಿದ KA 28 F 2066 ನಂಬರಿನ ಬಸ್ ನಿರ್ವಾಹಕ ತಾನು ಟಿಕೆಟ್ ನೀಡುವುದು ಬಿಟ್ಟು ವಿದ್ಯಾರ್ಥಿಗೆ ಹಚ್ಚಿದ್ದು, ವಿದ್ಯಾರ್ಥಿಯು ಟಿಕೆಟ್ ಹಂಚಿಕೆ ಮಾಡುತ್ತಿರುವ ದೃಶ್ಯ ಪ್ರಯಾಣಿಕರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಫುಲ್ ವೈಲರ್ ಆಗಿದೆ.

ಕಲಬುರಗಿ, (ಆಗಸ್ಟ್ 19): ಏ ಯಾರಲ್ಲಿ ಟಿಕೆಟ್… ಸರ್ಕಾರಿ ಶಾಲೆಯ ವಿದ್ಯಾರ್ಥಿ, ಸಾರಿಗೆ ಬಸ್‌ನಲ್ಲಿ ಕಂಡಕ್ಟರ್ ಆಗಿ ಪ್ರಯಾಣಿಕರಿಗೆ ಟಿಕೆಟ್ ನೀಡಿದ ವಿಡಿಯೋ ವೈರಲ್ ಆಗಿದೆ. ಕಲಬುರಗಿಯ ಸಿಟಿ ಬಸ್ ನಿಲ್ದಾಣದಿಂದ ಕಾಳಗಿ ಕಡೆಗೆ ಚಲಿಸುವ ಕೆಕೆಆರ್ ಟಿಸಿ ಬಸ್ ಕಂಡಕ್ಟರ್, ವಿದ್ಯಾರ್ಥಿಗೆ ಟಿಕೆಟ್ ವಿತರಿಸುವ ಕೆಲಸ ನೀಡಿದ್ದಾರೆ. ಕಾಳಗಿ ತಾಲ್ಲೂಕಿನ ಡಿಪೋಗೆ ಸೇರಿದ KA 28 F 2066 ನಂಬರಿನ ಬಸ್ ನಿರ್ವಾಹಕ ತಾನು ಟಿಕೆಟ್ ನೀಡುವುದು ಬಿಟ್ಟು ವಿದ್ಯಾರ್ಥಿ ಕೈಗೆ ಮಷಿನ್ ನೀಡಿದ್ದು, ವಿದ್ಯಾರ್ಥಿಯು ಟಿಕೆಟ್ ಹಂಚಿಕೆ ಮಾಡುತ್ತಿರುವ ದೃಶ್ಯ ಪ್ರಯಾಣಿಕರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 19, 2026 03:39 PM
Loading...
Unable to load recommendations.
Follow Us
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More