Video: ಮರಳಿನಲ್ಲಿ ಅರಳಿದ 47 ಅಡಿ ಉದ್ದದ ಡೊನಾಲ್ಡ್​ ಟ್ರಂಪ್ ಆಕೃತಿ, ಕಲಾವಿದ ಸುದರ್ಶನ್​ರಿಂದ ಅಭಿನಂದನೆ

|

Updated on: Jan 20, 2025 | 7:41 AM

ಅಮೆರಿಕದ ನೂತನ ಅಧ್ಯಕ್ಷರಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವ ಡೊನಾಲ್ಡ್​ ಟ್ರಂಪ್​ಗೆ ಭಾರತದ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ತಮ್ಮ ಕಲೆ ಮೂಲಕ ಶುಭ ಕೋರಿದ್ದಾರೆ. ಒಡಿಶಾದ ಪುರಿ ಬೀಚ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರ 47 ಅಡಿ ಉದ್ದದ ಮರಳು ಆಕೃತಿ ರಚಿಸಿದ್ದಾರೆ. ಈ ಚಿತ್ರದ ಮೇಲೆ ಅವರು ವೆಲ್‌ಕಮ್ ಟು ವೈಟ್ ಹೌಸ್ ಎಂದು ಬರೆದಿದ್ದಾರೆ.

ಪಟ್ನಾಯಕ್ ಅವರು ತಮ್ಮ ಸ್ಯಾಂಡ್ ಆರ್ಟ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳ ಜೊತೆಗೂಡಿ ಈ ಮರಳು ಕಲೆಯನ್ನು ಸಿದ್ಧಪಡಿಸಿದ್ದಾರೆ. ಟ್ರಂಪ್ ಸೋಮವಾರ, ಜನವರಿ 20 ರಂದು ಯುಎಸ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸುದರ್ಶನ್ ಪಟ್ನಾಯಕ್ ಅವರ ಈ ಕಲೆ ಅಮೆರಿಕದ ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಮಹತ್ವದ ಸಂದೇಶವನ್ನು ನೀಡುತ್ತದೆ.

ಈ ಹಿಂದೆ ಹಲವು ಬಾರಿ ಡೊನಾಲ್ಡ್ ಟ್ರಂಪ್ ಅವರ ಸ್ಯಾಂಡ್ ಆರ್ಟ್ ಮಾಡಿರುವುದು ಪಟ್ನಾಯಕ್ ಅವರ ಈ ಕಲೆ ವಿಶೇಷ. ಅವರು ತಮ್ಮ ಕಲೆಯ ಮೂಲಕ ಅನೇಕ ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಪಟ್ನಾಯಕ್ ತಮ್ಮ ಮರಳು ಕಲೆಯ ಮೂಲಕ ಎಚ್‌ಐವಿ/ಏಡ್ಸ್, ಜಾಗತಿಕ ತಾಪಮಾನ, ಕೋವಿಡ್ -19, ಪ್ಲಾಸ್ಟಿಕ್ ಮಾಲಿನ್ಯ ಮತ್ತು ಭಯೋತ್ಪಾದನೆಯಂತಹ ಸಮಸ್ಯೆಗಳ ಕುರಿತು ಸಂದೇಶಗಳನ್ನು ಈ ಹಿಂದೆ ನೀಡಿದ್ದರು.

ಸುದರ್ಶನ್ ಪಟ್ನಾಯಕ್ ಅವರು ಪದ್ಮಶ್ರೀ ಪುರಸ್ಕೃತ ಕಲಾವಿದರಾಗಿದ್ದಾರೆ ಮತ್ತು ಇದುವರೆಗೆ ಪ್ರಪಂಚದಾದ್ಯಂತ 50 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮರಳು ಕಲಾ ಚಾಂಪಿಯನ್‌ಶಿಪ್‌ಗಳು ಮತ್ತು ಉತ್ಸವಗಳಲ್ಲಿ ಭಾಗವಹಿಸಿದ್ದಾರೆ. ಪಟ್ನಾಯಕ್ ಅವರ ಕಲೆಯು ನೋಡಲು ಸುಂದರವಾಗಿರುವುದು ಮಾತ್ರವಲ್ಲದೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸ್ಫೂರ್ತಿಯ ಮೂಲ ಎಂದೇ ಹೇಳಬಹುದು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ