Jahan-e-Khusrau: ಜಹಾನ್​-ಎ-ಖುಸ್ರೋ ಸೂಫಿ ಸಂಗೀತ ಉತ್ಸವದ ಝಲಕ್ ಹಂಚಿಕೊಂಡ ಮೋದಿ

Updated on: Mar 01, 2025 | 10:02 AM

ದೆಹಲಿಯ ಸುಂದರ್ ನರ್ಸರಿಯಲ್ಲಿ ಶುಕ್ರವಾರ ಜರುಗಿದ ‘ಜಹಾನ್​-ಎ-ಖುಸ್ರೋ ’ ಸೂಫಿ ಸಂಗೀತ ಉತ್ಸವದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಜಹಾನ್ ಎ ಖುಸ್ರೋ ಕಾರ್ಯಕ್ರಮದಲ್ಲಿ ಭಾರತದ ಮಣ್ಣಿನ ಘಮವಿದೆ ಎಂದರು. ಪವಿತ್ರ ರಂಜಾನ್ ಮಾಸ ಆರಂಭವಾಗುತ್ತಿದೆ, ನಿಮಗೆಲ್ಲರಿಗೂ ಮತ್ತು ದೇಶವಾಸಿಗಳಿಗೂ ರಂಜಾನ್ ಹಬ್ಬದ ಶುಭಾಶಯಗಳು.

ದೆಹಲಿ, ಮಾರ್ಚ್​ 1: ದೆಹಲಿಯ ಸುಂದರ್ ನರ್ಸರಿಯಲ್ಲಿ ಶುಕ್ರವಾರ ಜರುಗಿದ ‘ಜಹಾನ್​-ಎ-ಖುಸ್ರೋ ’ ಸೂಫಿ ಸಂಗೀತ ಉತ್ಸವದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಜಹಾನ್ ಎ ಖುಸ್ರೋ ಕಾರ್ಯಕ್ರಮದಲ್ಲಿ ಭಾರತದ ಮಣ್ಣಿನ ಘಮವಿದೆ ಎಂದರು. ಪವಿತ್ರ ರಂಜಾನ್ ಮಾಸ ಆರಂಭವಾಗುತ್ತಿದೆ, ನಿಮಗೆಲ್ಲರಿಗೂ ಮತ್ತು ದೇಶವಾಸಿಗಳಿಗೂ ರಂಜಾನ್ ಹಬ್ಬದ ಶುಭಾಶಯಗಳು.  ಜಹಾನ್-ಎ-ಖುಸ್ರೋ ಸರಣಿಯು 25 ವರ್ಷಗಳನ್ನು ಪೂರೈಸುತ್ತಿದೆ. ಈ 25 ವರ್ಷಗಳಲ್ಲಿ, ಈ ಕಾರ್ಯಕ್ರಮವು ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿರುವುದು ದೊಡ್ಡ ಸಾಧನೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದಲ್ಲಿ ಸೂಫಿ ಸಂಪ್ರದಾಯವು ತನಗಾಗಿ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದೆ. ಸೂಫಿ ಸಂತರು ತಮ್ಮನ್ನು ಮಸೀದಿಗಳಿಗೆ ಸೀಮಿತಗೊಳಿಸಿಲ್ಲ. ಆ ಕಾಲದಲ್ಲಿ ಭಾರತವು ಜಗತ್ತಿನ ಎಲ್ಲಾ ದೊಡ್ಡ ದೇಶಗಳಿಗಿಂತ ಶ್ರೇಷ್ಠವಾಗಿತ್ತು ಎಂದು ಹಜರತ್ ಖುಸ್ರೋ ಹೇಳಿದ್ದರು. ಸಂಸ್ಕೃತವು ವಿಶ್ವದ ಅತ್ಯುತ್ತಮ ಭಾಷೆ ಎಂದು ಅವರು ಹೇಳಿದರು. ಭಾರತದ ಋಷಿಮುನಿಗಳು ಶ್ರೇಷ್ಠ ವಿದ್ವಾಂಸರಿಗಿಂತಲೂ ಶ್ರೇಷ್ಠರು ಎಂದು ಅವರು ಪರಿಗಣಿಸಿದ್ದರು ಎಂದು ಮೋದಿ ಹೇಳಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ