ಮೈಸೂರು: ಕಾಡಾನೆ ದಾಳಿಯಿಂದ ಬೆಳೆದು ನಿಂತು ಕಬ್ಬು ನಾಶ, ಪರಿಹಾರ ಕೇಳುತ್ತಿರುವ ನೊಂದ ರೈತ

ಅರುಣ್​ ಕುಮಾರ್​ ಬೆಳ್ಳಿ

Updated on: Oct 10, 2023 | 11:04 AM

ಕಾಡಾನೆಳಿಂದ ಬೆಳೆ ಹಾಳಾದಾಗಲೆಲ್ಲ ಅರಣ್ಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಮೀನಿನ ಒಂದು ಪೋಟೋ ತೆಗೆದುಕೊಂಡು ಒಂದೆರಡು ಸಾವಿರ ರೂಪಾಯಿ ಪರಿಹಾರ ನೀಡುತ್ತಾರೆ ಎಂದು ಮಹೇಶ್ ಹೇಳುತ್ತಾರೆ. ಬೆಳೆಗಾಗಿ ಸಾಲಸೋಲ ಮಾಡಿದ್ದು ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಅವರು ಮನವಿ ಮಾಡುತ್ತಿದ್ದಾರೆ.

ಮೈಸೂರು: ಮಳೆಯಿಲ್ಲದೆ (deficit rain) ರಾಜ್ಯಾದಾದ್ಯಂತ ರೈತರು ಕಂಗಾಲಾಗಿದ್ದರೆ ನೀರಿಗಾಗಿ ವ್ಯವಸ್ಥೆ ಮಾಡಿಕೊಂಡು ಕಬ್ಬು ಬೆಳೆದ ಈ ರೈತನ ಗೋಳು ಬೇರೆ ತೆರನಾದದ್ದು. ಜಿಲ್ಲೆಯ ನಂಜನಗೂಡು (Nanjangud) ತಾಲ್ಲೂಕಿನ ಹೊಸವೀಡು ಗ್ರಾಮದ ರೈತ ಮಹೇಶ್ (Mahesh) ಅನ್ನೋರು ತನ್ನ 5-ಎಕರೆ ಜಮೀನಲ್ಲಿ ಸೊಂಪಾಗಿ ಕಬ್ಬು ಬೆಳೆದಿದ್ದರು. ಆದರೆ, ಕಾಡಾನೆಗಳ ದಾಳಿಯಿಂದ ಬೆಳೆದು ನಿಂತಿದ್ದ ಕಬ್ಬು ಸರ್ವನಾಶವಾಗಿದೆ. ಹೀಗೆ ಆಗುತ್ತಿರೋದು ಮೊದಲ ಸಲವೇನಲ್ಲ. ಕಾಡಾನೆಳಿಂದ ಬೆಳೆ ಹಾಳಾದಾಗಲೆಲ್ಲ ಅರಣ್ಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಮೀನಿನ ಒಂದು ಪೋಟೋ ತೆಗೆದುಕೊಂಡು ಒಂದೆರಡು ಸಾವಿರ ರೂಪಾಯಿ ಪರಿಹಾರ ನೀಡುತ್ತಾರೆ ಎಂದು ಮಹೇಶ್ ಹೇಳುತ್ತಾರೆ. ಬೆಳೆಗಾಗಿ ಸಾಲಸೋಲ ಮಾಡಿದ್ದು ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಅವರು ಮನವಿ ಮಾಡುತ್ತಿದ್ದಾರೆ. ಜಮೀನು ಸುತ್ತ ತಂತಿ ಬಿಗಿದು ಬೇಲಿ ನಿರ್ಮಿಸಿದರೂ ಆನೆಗಳು ಆದನ್ನು ಕಿತ್ತಿ, ತುಳಿದು ಒಳನುಗ್ಗುತ್ತಿವೆ ಅಂತ ರೈತ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.