ಚಾಮರಾಜನಗರ; ಒಂಟಿ ಸಲಗ ದಾಳಿಗೊಳಗಾಗಿ ರಾತ್ರಿಯಿಡೀ ನರಳಿದ್ದ ಯುವಕ, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಸ್ಥಳೀಯರ ಆಕ್ರೋಶ

ಹೆಚ್ಚಿನ ಚಿಕಿತ್ಸಾ ವೆಚ್ಚ ಭರಿಸಲಾಗದೆ ನಾಗೇಶ್ ತಾಯಿ ಕಂಗಾಲಾಗಿದ್ದಾರೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸದೆ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಮೊದಲು ಹಲವು ಬಾರಿ ಕಾಡಿನಲ್ಲಿ ಬೆಂಕಿ ಬಿದ್ದಾಗ ಆರಿಸಲು ಅರಣ್ಯಾಧಿಕಾರಿಗಳು ನಾಗೇಶ್ ಸಹಾಯ ಪಡೆದಿದ್ದರು, ಆದರೂ ಇದೀಗ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ಚಾಮರಾಜನಗರ; ಒಂಟಿ ಸಲಗ ದಾಳಿಗೊಳಗಾಗಿ ರಾತ್ರಿಯಿಡೀ ನರಳಿದ್ದ ಯುವಕ, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಸ್ಥಳೀಯರ ಆಕ್ರೋಶ
ಸಾಂದರ್ಭಿಕ ಚಿತ್ರ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: Ganapathi Sharma

Updated on: Aug 19, 2023 | 12:22 PM

ಚಾಮರಾಜನಗರ, ಆಗಸ್ಟ್ 19: ರಾಜ್ಯದ ಹಲವೆಡೆ ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದ್ದು, ಅನೇಕ ಕಡೆಗಳಲ್ಲಿ ಕಾಡುಪ್ರಾಣಿಗಳ (Elephant Attack) ದಾಳಿಗಳ ಬಗ್ಗೆ ವರದಿಯಾಗುತ್ತಿರುತ್ತವೆ. ಚಾಮರಾಜನಗರ (Chamarajanagar) ಮೇಲುಕಾಮನಹಳ್ಳಿ ಗ್ರಾಮದಲ್ಲಿ ಬರ್ಹಿದೆಸೆಗೆ ತೆರಳಿದ್ದ ಯುವಕನ ಮೇಲೆ ಒಂಟಿ ಸಲಗ ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯು ಆಗಸ್ಟ್ 13ರಂದೇ ನಡೆದಿದ್ದರೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಯುವಕ ನಾಗೇಶ್ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಆನೆ ದಾಳಿಗೆ ಒಳಗಾದ ಯುವಕನ ಬೆನ್ನು ಮೂಳೆ ಪುಡಿ ಪುಡಿಯಾಗಿದ್ದು ಕತ್ತಿನ ಹಿಂಭಾಗಕ್ಕೆ ಭಾರಿ ಹೊಡೆತ ಬಿದ್ದಿದೆ. ತಡರಾತ್ರಿ ಆನೆ ದಾಳಿ ನಡೆದಿದ್ದು ಬೆಳಗಿನ ಜಾವ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಬೆಳಿಗ್ಗೆ ನೋಡಿದಾಗ ಆನೆ ದಾಳಿ ನಡೆದ ವಿಷಯ ತಿಳಿದು ಬಂದಿದ್ದು, ರಾತ್ರಿಯಿಡಿ ಯುವಕ ಕಾಡಲ್ಲೇ ನರಳಾಡಿದ್ದ ಎನ್ನಲಾಗಿದೆ. ನಂತರ ಗಾಯಾಳು ನಾಗೇಶ್​ ಅವರನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಪಾಸಣೆಯ ನಂತರ ವೈದ್ಯರು ಬಲಗಾಲು ಸ್ವಾದೀನ ತಪ್ಪಿದೆ ಮತ್ತು ಗಾಯಾಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಚಿಕಿತ್ಸಾ ವೆಚ್ಚ ಭರಿಸಲಾಗದೆ ನಾಗೇಶ್ ತಾಯಿ ಕಂಗಾಲಾಗಿದ್ದಾರೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸದೆ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಮೊದಲು ಹಲವು ಬಾರಿ ಕಾಡಿನಲ್ಲಿ ಬೆಂಕಿ ಬಿದ್ದಾಗ ಆರಿಸಲು ಅರಣ್ಯಾಧಿಕಾರಿಗಳು ನಾಗೇಶ್ ಸಹಾಯ ಪಡೆದಿದ್ದರು, ಆದರೂ ಇದೀಗ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಅಮಾನವೀಯವಾಗಿ ವರ್ತಿಸಿದ್ದಾರೆ. ಘಟನಾ ಸ್ಥಳಕ್ಕೂ ಅರಣ್ಯಾಧಿಕಾರಿಗಳ ಕಚೇರಿಗೂ ಕೇವಲ 500 ಮೀಟರ್ ಅಂತರವಿದೆ. ಆದರೂ ಪ್ರಕರಣ ನಡೆದು ಇಷ್ಟು ದಿನವಾದ್ರೂ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ನಿರ್ಲಕ್ಷವಹಿಸಿದ್ದರು ಎಂದು ಸ್ಥಳೀಯರು ದೂರಿದ್ದಾರೆ. ಟಿವಿ9 ಕ್ಯಾಮೆರಾ ಕಂಡ ಬಳಿಕ ಶೀಘ್ರವೇ ಹೆಚ್ಚೆತ್ತ ಅರಣ್ಯಾಧಿಕಾರಿಗಳು ಸಂತ್ರಸ್ತನ ಮನೆಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಕಾಡಂಚಿನ ಜನರಿಗೆ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ ಹಿಡಿದ ಕೂಂಬಿಂಗ್ ಕಿಂಗ್ ಬಲರಾಮ ತಂಡ

ಈ ಮೊದಲು ಕೂಡ ಇಂಥದ್ದೇ ಹಲವಾರು ಘಟನೆಗಳು ಚಾಮರಾಜನಗರ ಜಿಲ್ಲೆಯಲ್ಲಿಯೇ ದಾಖಲಾಗಿದೆ. ಈ ಮಧ್ಯೆ ಶುಕ್ರವಾರ ರಾತ್ರಿ ನಡೆದ ಕಾರ್ಯಚರಣೆಯಲ್ಲಿ ಒಂಟಿ ಸಲಗವೊಂದನ್ನು ಸೆರೆ ಹಿಡಿಯಲಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಬೆಳೆ ನಾಶ ಮಾಡುತ್ತಿದ್ದ ಆನೆಯನ್ನು ಅರಿವಳಿಕೆ ನೀಡಿ ಸೆರೆಹಿಡಿಯಲಾಗಿದೆ. ಕಾಡಾನೆಗಳು ಬೆಳೆ ನಾಶವಾಗುತ್ತಿರುವುದು ಮಾತ್ರವಲ್ಲದೆ, ಕಾಡಿನಂಚಿನ ಜನತೆಯ ಜೀವಕ್ಕೂ ಆಪತ್ತಾಗಿ ಪರಿಣಮಿಸಿವೆ. ಒಂಟಿ ಸಲಗದ ದಾಳಿಯಿಂದ ಸ್ವಲ್ಪ ನಿಟ್ಟುಸಿರು ಬಿಟ್ಟ ಜನತೆ, ಖಾಯಂ ಪರಿಹಾರಕ್ಕೆ ಎದುರು ನೋಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ