ಬೆಳಗಾವಿ: ಪೊಲೀಸರ ಮೇಲೆ ಕಲ್ಲು ತೂರಾಟ; ವಾಹನಗಳ ಸ್ಥಿತಿ ಹೇಗಾಗಿದೆ ನೋಡಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಕ್ರಾಸ್ ಬಳಿ ನಡೆದ ಕಲ್ಲು ತೂರಾಟದಲ್ಲಿ ಕೆಎಸ್‌ಆರ್‌ಟಿಸಿಯ ನಾಲ್ಕು ಬಸ್ಗಳಿಗೆ ಭಾರಿ ಹಾನಿಯಾಗಿದೆ. ಗೂಡ್ಸ್ ವಾಹನವೊಂದಕ್ಕೂ ಹಾನಿಯಾಗಿದೆ. ಗಾಜುಗಳು ಸಂಪೂರ್ಣ ಪುಡಿಪುಡಿಯಾಗಿವೆ. ಘಟನಾ ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿಡಿಯೋ ನೋಡಿ.
ಬೆಳಗಾವಿ, ನವೆಂಬರ್ 07: ಟನ್ ಕಬ್ಬಿಗೆ 3,500 ರೂ ಎಫ್ಆರ್ಪಿ ನಿಗದಿಪಡಿಸುವಂತೆ ರೈತರು ರಸ್ತೆಗಿಳಿದಿದ್ದಾರೆ. ಹೋರಾಟದ ಕಾವು ಜೋರಾಗಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಕ್ರಾಸ್ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ನಾಲ್ಕು ಕೆಎಸ್‌ಆರ್‌ಟಿಸಿ ಬಸ್ಗಳ ಗಾಜು ಪುಡಿ ಆಗಿದೆ. ಒಂದು ಗೂಡ್ಸ್ ವಾಹನಕ್ಕೂ ಕಲ್ಲು ತೂರಾಟ ಮಾಡಲಾಗಿದೆ. ಅಷ್ಟೇ ಅಲ್ಲದೆ ಪೊಲೀಸರ ಮೇಲೂ ಕಲ್ಲು ತೂರಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
