ಬಾಗಲಕೋಟೆ ಕಂಕನವಾಡಿಯ ರೈತರು ಕಬ್ಬು ಲೋಡ್ ಆಗಿದ್ದ ಟ್ರ್ಯಾಕ್ಟರನ್ನು ನದಿ ದಾಟಿಸಿದ ರೀತಿ ನೋಡಿ ದಂಗಾಗುತ್ತೀರಿ!
ಬಾಗಲಕೋಟೆಗೆ ಹತ್ತಿರದ ಕಂಕನವಾಡಿ ನಡುಗಡ್ಡೆಯ ಕಬ್ಬು ಬೆಳೆಗಾರರು ಇಂಥದೊಂದು ಪ್ರಯೋಗವನ್ನು ಅವರು ಕಜಕಿಸ್ತಾನದಲ್ಲಿ ಮಾಡಿದ್ದನ್ನು ಟಿವಿಯಲ್ಲಿ ನೋಡಿದ್ದರಂತೆ.
ಬಾಗಲಕೋಟೆ: ಬೋಟ್, ನಾವೆ ಅಥವಾ ದೋಣಿಯಲ್ಲಿ ಕಬ್ಬಿನ ಹೊರೆಗಳನ್ನು ಸಾಗಿಸಬಹುದು ಆದರೆ ಕಬ್ಬು ಲೋಡ್ ಆಗಿರುವ ಟ್ರ್ಯಾಕ್ಟರೊಂದನ್ನು ನದಿಯ ಒಂದು ಭಾಗದಿಂದ ಮತ್ತೊಂದು ದಡಕ್ಕೆ ಸಾಗಿಸುವುದು ಸಾಧ್ಯವೇ? ಸಾಧ್ಯ ಅನ್ನುತ್ತಾರೆ ಬಾಗಲಕೋಟೆಗೆ (Bagalkot) ಹತ್ತಿರದ ಕಂಕನವಾಡಿ ನಡುಗಡ್ಡೆಯ ಕಬ್ಬು ಬೆಳೆಗಾರರು (sugarcane growers). ಇಂಥದೊಂದು ಪ್ರಯೋಗವನ್ನು ಅವರು ಕಜಕಿಸ್ತಾನದಲ್ಲಿ ಮಾಡಿದ್ದನ್ನು ಟಿವಿಯಲ್ಲಿ ನೋಡಿದ್ದರಂತೆ. ಅವರ ಹಾಗೆಯೇ ಎರಡು ಬೋಟ್ ಗಳ ನಡುವೆ ಎರಡು ಆ್ಯಂಗ್ಲರ್ಗಳನ್ನಿಟ್ಟು (angler) ಕಬ್ಬಿನ ಲೋಡ್ ಅಗಿದ್ದ ಟ್ರ್ಯಾಕ್ಟರನ್ನು ಜಾಗರೂಕತೆಯಿಂದ ಬೋಟ್ ಗಳ ಮಧ್ಯಭಾಗಕ್ಕೆ ಹತ್ತಿಸಿ ನಿಧಾನವಾಗಿ ಅವುಗಳನ್ನು ಕೃಷ್ಣಾ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ತಂದಿದ್ದಾರೆ. ರೈತರ ಬುದ್ಧಿಮತ್ತೆಗೊಂದು ಸಲಾಂ ಮಾರಾಯ್ರೇ!