ಒಂದೇ ಕಡೆ ಅಂಬಿ ಹಾಗೂ ಅಪ್ಪು ಪುತ್ಥಳಿ ಅನಾವರಣ ಮಾಡಿದ ಸಂಸದೆ ಸುಮಲತಾ

| Updated By: ರಾಜೇಶ್ ದುಗ್ಗುಮನೆ

Updated on: Nov 25, 2022 | 10:55 AM

ಸಂಸದೆ ಸುಮಲತಾ ಅಂಬರೀಷ್ ಅವರು ಪುತ್ಥಳಿ ಲೋಕಾರ್ಪಣೆ ಮಾಡಿದ್ದಾರೆ. ಎರಡು ಸ್ಟಾರ್ ನಟರ ಪುತ್ಥಳಿಯನ್ನು ಒಂದೇ ಕಡೆ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.  

ಅಂಬರೀಷ್ (Ambareesh) ಹಾಗೂ ಪುನೀತ್ ರಾಜ್​ಕುಮಾರ್ ಅವರನ್ನು ಕಳೆದುಕೊಂಡಿದ್ದು ಚಿತ್ರರಂಗದ ಪಾಲಿಗೆ ದೊಡ್ಡ ನಷ್ಟ. ನವೆಂಬರ್ 24ರಂದು ಅಂಬರೀಷ್ ಅವರ ನಾಲ್ಕನೇ ವರ್ಷದ ಪುಣ್ಯತಿಥಿ ನೆರವೇರಿದೆ. ಈ ವೇಳೆ ಮಂಡ್ಯದ ಡಿ.ಹೊಸೂರು ಗ್ರಾಮದಲ್ಲಿಅಂಬಿ ಹಾಗೂ ಅಪ್ಪು ಅವರ ಪುತ್ಥಳಿ ಅನಾವರಣಗೊಂಡಿದೆ. ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಪುತ್ಥಳಿ ಲೋಕಾರ್ಪಣೆ ಮಾಡಿದ್ದಾರೆ. ಎರಡು ಸ್ಟಾರ್ ನಟರ ಪುತ್ಥಳಿಯನ್ನು ಒಂದೇ ಕಡೆ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.