ಗೋವಾ ‘ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ‘ರೇಮೊ’ ಪ್ರೀಮಿಯರ್​; ಸಂತಸ ಹಂಚಿಕೊಂಡ ಚಿತ್ರತಂಡ 

ಪ್ರತಿಷ್ಠಿತ 53ನೇ ‘ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ’ ಗೋವಾದಲ್ಲಿ ನಡೆಯುತ್ತಿದೆ. ಇಂದು ಸಂಜೆ ಫಿಲ್ಮಂ ಫೆಸ್ಟಿವಲ್​​ ‘ರೇಮೊ’ ಸಿನಿಮಾ ಪ್ರೀಮಿಯರ್ ಆಗಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 24, 2022 | 9:39 PM

ಪ್ರತಿಷ್ಠಿತ 53ನೇ ‘ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ’ ಗೋವಾದಲ್ಲಿ ನಡೆಯುತ್ತಿದೆ. ಬೇರೆ ಬೇರೆ ದೇಶಗಳ ಆಯ್ದ ಚಿತ್ರಗಳನ್ನು ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಈ ಫಿಲ್ಮ್ ಫೆಸ್ಟಿವಲ್​ಗೆ ಪವನ್ ಒಡೆಯರ್ ನಿರ್ದೇಶನದ, ನಟ ಇಶಾನ್​ ಮತ್ತು ನಟಿ ಆಶಿಕಾ ರಂಗನಾಥ್ ನಟನೆಯ ‘ರೇಮೊ’ (remo) ಚಿತ್ರ ಕೂಡ ಪ್ರದರ್ಶನಗೊಂಡಿದೆ. ಟ್ರೈಲರ್​ನಿಂದಲೇ ‘ರೇಮೊ’ ಚಿತ್ರ ಈಗಾಗಲೇ ಕಮಾಲ್​ ಮಾಡಿದೆ. ಇಂದು ಸಂಜೆ ಫಿಲ್ಮ್ ಫೆಸ್ಟಿವಲ್​​ ‘ರೇಮೊ’ ಸಿನಿಮಾ ಪ್ರೀಮಿಯರ್ ಆಗಿದೆ. ಹಾಗಾಗಿ ಇಡೀ ಚಿತ್ರತಂಡ ಗೋವಾಕ್ಕೆ ಹಾರಿದೆ. ‘ರೇಮೊ’ ಸಿನಿಮಾವನ್ನು ಎಲ್ಲರೊಂದಿಗೆ ಕುಳಿತು ವೀಕ್ಷಣೆ ಮಾಡಲಾಗಿದೆ. ಈ ಕುರಿತಾಗಿ ಚಿತ್ರತಂಡ ಸಂತಸವನ್ನ ಹಂಚಿಕೊಂಡಿದೆ. ನ. 25 ರಂದು ‘ರೇಮೊ’ ಸಿನಿಮಾ ರಾಜ್ಯಾದ್ಯಂತ ಗ್ರ್ಯಾಂಡ್​ ಆಗಿ ತೆರೆಗೆ ಬರುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada