ಮಂಗಳೂರು ಬ್ಲಾಸ್ಟ್: ಶಾರೀಕ್​ ಬಂಧಿಸಿ ಖುಷಿಪಡುತ್ತಿದ್ದೀರಿ, ನೀವು ನಿಮ್ಮ ಫಲವನ್ನು ಶೀಘ್ರದಲ್ಲೇ ಪಡೆಯುತ್ತೀರಿ: ADGP ಅಲೋಕ್​ ಕುಮಾರ್​ಗೆ ಬೆದರಿಕೆ

ಮಂಗಳೂರು ಬ್ಲಾಸ್ಟ್: ಶಾರೀಕ್​ ಬಂಧಿಸಿ ಖುಷಿಪಡುತ್ತಿದ್ದೀರಿ, ನೀವು ನಿಮ್ಮ ಫಲವನ್ನು ಶೀಘ್ರದಲ್ಲೇ ಪಡೆಯುತ್ತೀರಿ: ADGP ಅಲೋಕ್​ ಕುಮಾರ್​ಗೆ ಬೆದರಿಕೆ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 24, 2022 | 5:01 PM

ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮತ್ತೊಂದು ದಾಳಿಯ ಎಚ್ಚರಿಕೆ ನೀಡಿದೆ. ಅಲ್ಲದೇ ADGP ಅಲೋಕ್​ ಕುಮಾರ್​ಗೆ ಬೆದರಿಕೆ ಹಾಕಿದೆ

ಬೆಂಗಳೂರು: ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ಉಗ್ರರ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈ ಸ್ಫೋಟ ಪ್ರಕರಣದ ಇಡೀ ದೇಶದಾದ್ಯಂತ ಸದ್ದು ಮಾಡುತ್ತಿದೆ. ಇದರ ಮಧ್ಯೆ ಇದೀಗ ಆರೋಪಿ ಶಾರೀಕ್​​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮತ್ತೊಂದು ದಾಳಿಯ ಎಚ್ಚರಿಕೆ ನೀಡಿದೆ.

ಶಾರೀಕ್ ಬೆನ್ನಿಗೆ ನಿಂತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್: ಶೀಘ್ರ ಇನ್ನೊಂದು ದಾಳಿ ಮಾಡುವ ಬೆದರಿಕೆ

ಇನ್ನು ಈ ಹೇಳಿಕೆಯಲ್ಲಿ ಎಡಿಜಿಪಿ ಅಲೋಕ್​ ಕುಮಾರ್​ಗೂ  ಎಚ್ಚರಿಕೆ ನೀಡಿದ್ದು, ಶಾರೀಕ್​ ಬಂಧಿಸಿ ಖುಷಿಪಡುತ್ತಿದ್ದೀರಿ, ಇದು ಶಾಶ್ವತವಲ್ಲ. ನೀವು ನಿಮ್ಮ ಫಲವನ್ನು ಶೀಘ್ರದಲ್ಲೇ ಪಡೆಯುತ್ತೀರಿ. ನೀವು ನಮ್ಮ ದೃಷ್ಟಿಯಲ್ಲೇ ಇದ್ದೀರಿ, ನಿಮ್ಮನ್ನು ನಾವು ತಲುಪುತ್ತೇವೆ. ಆದರೆ ಯಾವಾಗ ಅನ್ನೋದು ಮುಖ್ಯವಲ್ಲ ಎಂದು ಐಆರ್​​ಸಿ ಎಡಿಜಿಪಿ ಅಲೋಕ್​ ಕುಮಾರ್​ಗೆ ಬೆದರಿಕೆ ಸಂದೇಶ ನೀಡಿದೆ.

Published on: Nov 24, 2022 04:42 PM