ರವಿ ತುಲಾ ರಾಶಿಯಲ್ಲಿ, ಚಂದ್ರ ಮೇಷ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಹೇಗಿದೆ ನೋಡಿ
ನವೆಂಬರ್ 06, 2025 ರ ದೈನಂದಿನ ರಾಶಿ ಫಲಾಫಲಗಳನ್ನು ಡಾ. ಬಸವರಾಜ ಗುರೂಜಿ ಇಲ್ಲಿ ನೀಡಿದ್ದಾರೆ. ಪ್ರತಿ ರಾಶಿಯವರು ಆರ್ಥಿಕ ಲಾಭ, ವೃತ್ತಿ ಪ್ರಗತಿ, ಆರೋಗ್ಯ ಮತ್ತು ಪ್ರಯಾಣ ಯೋಗದ ಕುರಿತು ಮಾಹಿತಿ ಪಡೆಯಬಹುದು. ಜೊತೆಗೆ, ಅದೃಷ್ಟದ ಸಂಖ್ಯೆ, ಬಣ್ಣ, ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳ ವಿವರಗಳನ್ನೂ ನೀಡಲಾಗಿದೆ.
2025 ರ ನವೆಂಬರ್ 06, ಗುರುವಾರದ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಪ್ರಸ್ತುತಪಡಿಸಿದ್ದಾರೆ. ಈ ದಿನ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಕಾರ್ತೀಕ ಮಾಸ, ಶರದ್ ಋತು, ಕೃಷ್ಣಪಕ್ಷ ಪಾಡ್ಯವಾಗಿದ್ದು, ಭರಣಿ ನಕ್ಷತ್ರ ಮತ್ತು ವ್ಯತಿಪಾತ ಯೋಗವಿದೆ. ರವಿ ತುಲಾ ರಾಶಿಯಲ್ಲಿ, ಚಂದ್ರ ಮೇಷ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ರಾಹುಕಾಲ ಮಧ್ಯಾಹ್ನ 1:29 ರಿಂದ 2:57 ರವರೆಗೆ ಇದ್ದು, ಸರ್ವ ಸಿದ್ಧಿ ಮತ್ತು ಶುಭಕಾಲ ಮಧ್ಯಾಹ್ನ 12:03 ರಿಂದ 1:27 ರವರೆಗೆ ಇರಲಿದೆ.
