ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್ ಔಟ್, ಮ್ಯಾಚ್ ಟೈ
17ನೇ ಓವರ್‌ನ ಮೊದಲ ಎಸೆತದ ನಂತರ ಜೀತ್ ರಾವಲ್ (23) ಅವರನ್ನು ನಿವೃತ್ತರಾಗಿ ಹಿಂತಿರುಗುವಂತೆ ನಾರ್ದರ್ನ್ ನೈಟ್ಸ್ ಸೂಚಿಸಿದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಕ್ಸೇವಿಯರ್ ಬೆಲ್ (9) ಅವರನ್ನು ಕೂಡ ವಾಪಸ್ ಕರೆಸಲಾಯಿತು. ಈ ಮೂಲಕ ನಾರ್ದರ್ನ್ ನೈಟ್ಸ್ ತಂಡವು ಟಿ20 ಕ್ರಿಕೆಟ್ನಲ್ಲಿ ಇಬ್ಬರು ಆಟಗಾರರನ್ನು ರಿಟೈರ್ಡ್ ಔಟ್ ಮಾಡಿದ ಮೊದಲ ತಂಡ ಎನಿಸಿಕೊಂಡಿತು.
ನ್ಯೂಝಿಲೆಂಡ್ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ ಟೂರ್ನಿಯ 10ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಬೇ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನಾರ್ದರ್ನ್ ನೈಟ್ಸ್ vs ಒಟಾಗೋ ತಂಡಗಳು ಮುಖಾಮುಖಿಯಾಗಿದ್ದವು.
ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಒಟಾಗೋ ತಂಡ 20 ಓವರ್ಗಳಲ್ಲಿ 166 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನಾರ್ದರ್ನ್ ನೈಟ್ಸ್ 10 ಓವರ್ಗಳಲ್ಲಿ 82 ರನ್ ಕಲೆಹಾಕಿದ್ದರು. ಆದರೆ ಬಳಿಕ ಇಬ್ಬರು ಪ್ರಮುಖ ದಾಂಡಿಗರು ರನ್ ಕಲೆಹಾಕಲು ಪರದಾಡಿದರು.
17ನೇ ಓವರ್‌ನ ಮೊದಲ ಎಸೆತದ ನಂತರ ಜೀತ್ ರಾವಲ್ (23) ಅವರನ್ನು ನಿವೃತ್ತರಾಗಿ ಹಿಂತಿರುಗುವಂತೆ ನಾರ್ದರ್ನ್ ನೈಟ್ಸ್ ಸೂಚಿಸಿದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಕ್ಸೇವಿಯರ್ ಬೆಲ್ (9) ಅವರನ್ನು ಕೂಡ ವಾಪಸ್ ಕರೆಸಲಾಯಿತು. ಈ ಮೂಲಕ ನಾರ್ದರ್ನ್ ನೈಟ್ಸ್ ತಂಡವು ಟಿ20 ಕ್ರಿಕೆಟ್ನಲ್ಲಿ ಇಬ್ಬರು ಆಟಗಾರರನ್ನು ರಿಟೈರ್ಡ್ ಔಟ್ ಮಾಡಿದ ಮೊದಲ ತಂಡ ಎನಿಸಿಕೊಂಡಿತು.
ಇದಾದ ಬಳಿಕ ಹೋರಾಟ ಮುಂದುವರೆಸಿದ ನಾರ್ದರ್ನ್ ನೈಟ್ಸ್ ತಂಡವು ಕೊನೆಯ ಓವರ್ನಲ್ಲಿ 18 ರನ್ಗಳಿಸುವ ಮೂಲಕ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ವಿಶೇಷ ಎಂದರೆ ಸೂಪರ್ ಸ್ಮ್ಯಾಶ್ ಲೀಗ್ನಲ್ಲಿ ಸೂಪರ್ ಓವರ್ ಆಡಿಸಲಾಗುತ್ತಿಲ್ಲ. ಹೀಗಾಗಿ ಉಭಯ ತಂಡಗಳು ತಲಾ 2 ಅಂಕಗಳನ್ನು ಹಂಚಿಕೊಂಡಿದೆ.