ನಾನು ನಂದಿನಿ ತಿರುಪತಿಗೆ ಹೊಂಟೀನಿ: ಮತ್ತೆ ತಿಮ್ಮಪ್ಪನ ಲಡ್ಡುವಿನಲ್ಲಿ ಕರ್ನಾಟಕ ತುಪ್ಪದ ಘಮ
ತಿಮ್ಮಪ್ಪನ ಲಡ್ಡು ತಯಾರಿಕೆಗೆ ಹಾಗೂ ಅದರ ರುಚಿಗೋಸ್ಕರ ನಂದಿನಿ ತುಪ್ಪವನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ವರ್ಷದ ಹಿಂದಷ್ಟೆ ತಿಮ್ಮಪ್ಪನಿಗೆ ನಂದಿನಿ ತುಪ್ಪವನ್ನು ಕಳುಹಿಸುವುದನ್ನು ಬಿಡಲಾಗಿತ್ತು. ಆದರೆ ಇದೀಗ ಮತ್ತೆ ಕೆಎಂಎಫ್ನಿಂದ ತಿರುಪತಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡಲಾಗುತ್ತಿದೆ. ಆ ಮೂಲಕ ತಿಮ್ಮಪ್ಪನ ಲಡ್ಡುವಿನಲ್ಲಿ ಕರ್ನಾಟಕ ತುಪ್ಪದ ಘಮವಿರಲಿದೆ.
ಬೆಂಗಳೂರು, ಆಗಸ್ಟ್ 28: ಕೆಎಂಎಫ್ನಿಂದ (KMF) ತಿರುಪತಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡಲಾಗುತ್ತಿದೆ. ಆ ಮೂಲಕ ಮತ್ತೆ ತಿಮ್ಮಪ್ಪನ ಲಡ್ಡುವಿನಲ್ಲಿ ಕರ್ನಾಟಕ ತುಪ್ಪದ ಘಮ ಆಡಲಿದೆ. ಆರಂಭದಲ್ಲಿ ಕೆಎಂಎಫ್ನಿಂದ 3050 ಟನ್ ತುಪ್ಪ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಕಳೆದ ವರ್ಷ ಟೆಂಡರ್ ಕೈತಪ್ಪಿದ್ದ ಹಿನ್ನಲೆ ತಿರುಪತಿಗೆ ಕೆಎಂಎಫ್ನಿಂದ ತುಪ್ಪ ಸರಬರಾಜು ನಿಂತಿತ್ತು. ಇದೀಗ ಮತ್ತೆ ತುಪ್ಪ ಸರಬರಾಜು ಮಾಡಲು ಕೆಎಂಎಫ್ ನಿರ್ಧರಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos