ನಾನು ನಂದಿನಿ ತಿರುಪತಿಗೆ ಹೊಂಟೀನಿ: ಮತ್ತೆ ತಿಮ್ಮಪ್ಪನ ಲಡ್ಡುವಿನಲ್ಲಿ ಕರ್ನಾಟಕ ತುಪ್ಪದ ಘಮ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 28, 2024 | 8:26 PM

ತಿಮ್ಮಪ್ಪನ ಲಡ್ಡು ತಯಾರಿಕೆಗೆ ಹಾಗೂ ಅದರ ರುಚಿಗೋಸ್ಕರ ನಂದಿನಿ ತುಪ್ಪವನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ವರ್ಷದ ಹಿಂದಷ್ಟೆ ತಿಮ್ಮಪ್ಪನಿಗೆ ನಂದಿನಿ ತುಪ್ಪವನ್ನು ಕಳುಹಿಸುವುದನ್ನು ಬಿಡಲಾಗಿತ್ತು. ಆದರೆ ಇದೀಗ ಮತ್ತೆ ಕೆಎಂಎಫ್​ನಿಂದ ತಿರುಪತಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡಲಾಗುತ್ತಿದೆ. ಆ ಮೂಲಕ ತಿಮ್ಮಪ್ಪನ ಲಡ್ಡುವಿನಲ್ಲಿ ಕರ್ನಾಟಕ ತುಪ್ಪದ ಘಮವಿರಲಿದೆ.

ಬೆಂಗಳೂರು, ಆಗಸ್ಟ್​ 28: ಕೆಎಂಎಫ್​ನಿಂದ (KMF) ತಿರುಪತಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡಲಾಗುತ್ತಿದೆ. ಆ ಮೂಲಕ ಮತ್ತೆ ತಿಮ್ಮಪ್ಪನ ಲಡ್ಡುವಿನಲ್ಲಿ ಕರ್ನಾಟಕ ತುಪ್ಪದ ಘಮ ಆಡಲಿದೆ. ಆರಂಭದಲ್ಲಿ ಕೆಎಂಎಫ್​ನಿಂದ 3050 ಟನ್ ತುಪ್ಪ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಗೃಹಕಚೇರಿ ‌ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಕಳೆದ ವರ್ಷ ಟೆಂಡರ್​ ಕೈತಪ್ಪಿದ್ದ ಹಿನ್ನಲೆ ತಿರುಪತಿಗೆ ಕೆಎಂಎಫ್​ನಿಂದ ತುಪ್ಪ ಸರಬರಾಜು ನಿಂತಿತ್ತು. ಇದೀಗ ಮತ್ತೆ ತುಪ್ಪ ಸರಬರಾಜು ಮಾಡಲು ಕೆಎಂಎಫ್​ ನಿರ್ಧರಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on