D Sudhakar: ಹಿರಿಯೂರು ಶಾಸಕ ಡಿ ಸುಧಾಕರ್ಗೆ ಸಚಿವ ಸ್ಥಾನ ಆಗ್ರಹಿಸಿ ಬೆಂಬಲಿಗರಿಂದ ಸಿಎಂ ಸಿದ್ದರಾಮಯ್ಯ ಕಾರು ಅಡ್ಡಗಟ್ಟುವ ಪ್ರಯತ್ನ!
ಹಿರಿಯೂರು ಶಾಸಕ ಡಿ ಸುಧಾಕರ್ ಬೆಂಬಲಿಗರು ಮುಖ್ಯಮಂತ್ರಿಗಳ ಕಾರನ್ನು ಘೇರಾವ್ ಮಾಡುವ ಪ್ರಯತ್ನ ಮಾಡಿದರು.
ಬೆಂಗಳೂರು: ಸಚಿವ ಸ್ಥಾನ ಯಾರಿಗೆ ಬೇಕಿಲ್ಲ? ಎಲ್ಲರಿಗೂ ಬೇಕು. ಆದರೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ 33 ಸಚಿವರಿಗಷ್ಟೇ ಸ್ಥಾನ ಲಭ್ಯವಾಗಲಿದೆ. ಹಾಗಾಗೇ ಆಯ್ಕೆಯಾಗಿರುವ ಎಲ್ಲಅ ಸದಸ್ಯರು ಮಂತ್ರಿಗಿರಿ ಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮೇಲೆ ತಮ್ಮ ಬೆಂಬಲಿಗರ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಹಿರಿಯೂರು ಶಾಸಕ ಡಿ ಸುಧಾಕರ್ (D Sudhakar) ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದ ಎದುರು ಜಮಾಯಿಸಿ ಸಚಿವ ಸ್ಥಾನಕ್ಕಾಗಿ ಘೋಷಣೆಗಳನ್ನು ಕೂಗುತ್ತಾ ಆಗ್ರಹಿಸಿದರು ಮತ್ತು ಮುಖ್ಯಮಂತ್ರಿಗಳ ಕಾರನ್ನು ಘೇರಾವ್ ಮಾಡುವ ಪ್ರಯತ್ನ ಕೂಡ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos