RR ನಗರ ಮುನಿರತ್ನ ಭವಿಷ್ಯ ನಿರ್ಧರಿಸಿದ ಸುಪ್ರೀಂ ಕೋರ್ಟ್‌

|

Updated on: Oct 14, 2020 | 10:55 AM

ದೆಹಲಿ: ಬೆಂಗಳೂರಿನ R.R. ನಗರ ಬೈಎಲೆಕ್ಷನ್ ಮುಂದೂಡಿಕೆ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. R.R. ನಗರ ಬೈಎಲೆಕ್ಷನ್ ಮುಂದೂಡಲು ತುಳಸಿ ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿಯನ್ನು  ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹಾಗಾಗಿ, ರಾಜರಾಜೇಶ್ವರಿ ನಗರ ಬೈಎಲೆಕ್ಷನ್ ನಿಗದಿಯಂತೆ ನವೆಂಬರ್ 3ರಂದು ನಡೆಯಲಿದೆ. R.R. ನಗರ ಅಸೆಂಬ್ಲಿ ಕ್ಷೇತ್ರದ ಚುನಾವಣಾ ಭವಿಷ್ಯವೂ ನಿರ್ಧಾರ ಇದರೊಂದಿಗೆ ಸುಪ್ರೀಂ ಕೋರ್ಟ್ ಮುನಿರತ್ನ ನಾಯ್ಡು ಅವರ ರಾಜಕೀಯ ಭವಿಷ್ಯ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಚುನಾವಣಾ ಭವಿಷ್ಯವನ್ನೂ ನಿರ್ಧರಿಸಿದೆ. […]

RR ನಗರ ಮುನಿರತ್ನ ಭವಿಷ್ಯ ನಿರ್ಧರಿಸಿದ ಸುಪ್ರೀಂ ಕೋರ್ಟ್‌
Follow us on

ದೆಹಲಿ: ಬೆಂಗಳೂರಿನ R.R. ನಗರ ಬೈಎಲೆಕ್ಷನ್ ಮುಂದೂಡಿಕೆ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ.

R.R. ನಗರ ಬೈಎಲೆಕ್ಷನ್ ಮುಂದೂಡಲು ತುಳಸಿ ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿಯನ್ನು  ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹಾಗಾಗಿ, ರಾಜರಾಜೇಶ್ವರಿ ನಗರ ಬೈಎಲೆಕ್ಷನ್ ನಿಗದಿಯಂತೆ ನವೆಂಬರ್ 3ರಂದು ನಡೆಯಲಿದೆ.

R.R. ನಗರ ಅಸೆಂಬ್ಲಿ ಕ್ಷೇತ್ರದ ಚುನಾವಣಾ ಭವಿಷ್ಯವೂ ನಿರ್ಧಾರ
ಇದರೊಂದಿಗೆ ಸುಪ್ರೀಂ ಕೋರ್ಟ್ ಮುನಿರತ್ನ ನಾಯ್ಡು ಅವರ ರಾಜಕೀಯ ಭವಿಷ್ಯ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಚುನಾವಣಾ ಭವಿಷ್ಯವನ್ನೂ ನಿರ್ಧರಿಸಿದೆ.

R.R. ನಗರ ಬೈಎಲೆಕ್ಷನ್ ಮುಂದೂಡುವಂತೆ ತುಳಸಿ ಮುನಿರಾಜುಗೌಡ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಸಿಜೆಐ ಪೀಠವು ಇಂದಿಗೆ ಆದೇಶ ಕಾಯ್ದಿರಿಸಿತ್ತು.

ಇದಕ್ಕೂ ಮುನ್ನ, ಇಂದು ಬೆಳಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಗೆ ತೆರಳಿ, ಅಲ್ಲಿಂದ ವಿಶೇಷ ಪೂಜೆ ನೆರವೇರಿಸಲು ಮುನಿರತ್ನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.

Published On - 12:05 pm, Tue, 13 October 20