ಬಿಗ್ ಬಾಸ್ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸೂರಜ್ ಅವರು ಸ್ಪರ್ಧಿಯಾಗಿದ್ದರು. ಅವರು ಈಗ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅವರು ಹೊರ ಬರಲು ಕಾರಣ ಏನು ಎಂಬುದು ಅವರಿಗೆ ಅರಿವಾಗಿದೆ. ಆ ಬಗ್ಗೆ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿ ಇದೆ ವಿವರ.
ಸೂರಜ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಷ್ಟು ದಿನ ಇದ್ದರು. ಮೂರನೇ ವಾರಕ್ಕೆ ಎಂಟ್ರಿ ಮತ್ತು ಮೂರನೇ ತಿಂಗಳಿಗೆ ಅವರು ಹೊರ ಬಂದರು. ಈ ವೇಳೆ ಅವರು ಒಂದಷ್ಟು ವಿಷಯಗಳನ್ನು ಹೇಳಿದ್ದಾರೆ. ‘ಎಲ್ಲರ ಜೊತೆ ಇನ್ನಷ್ಟು ಬೆರೆತಿದ್ದರೆ ಮತ್ತಷ್ಟು ದಿನ ಉಳಿದುಕೊಳ್ಳುವ ಸಾಧ್ಯತೆ ಇತ್ತು’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
