IND vs AUS: ಸೂರ್ಯಕುಮಾರ್ ಸಿಕ್ಸರ್‌ಗಳ ಸುನಾಮಿಗೆ ಹಿಟ್ಮ್ಯಾನ್ ದಾಖಲೆ ಧ್ವಂಸ
Suryakumar Yadav's 150 T20I Sixes Record: ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಮಳೆಯಿಂದ ರದ್ದಾದರೂ, ನಾಯಕ ಸೂರ್ಯಕುಮಾರ್ ಯಾದವ್ 150 ಟಿ20ಐ ಸಿಕ್ಸರ್‌ಗಳನ್ನು ಪೂರೈಸಿ ವಿಶೇಷ ದಾಖಲೆ ಬರೆದರು. 86 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ, ರೋಹಿತ್ ಶರ್ಮಾ ಹಿಂದಿಕ್ಕಿ ಭಾರತದ ಅತಿ ವೇಗದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಸತತ ವೈಫಲ್ಯದ ನಂತರ ಫಾರ್ಮ್‌ಗೆ ಮರಳಿದ್ದು ತಂಡಕ್ಕೆ ಸಮಾಧಾನಕರ ಸಂಗತಿ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 9.4 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 97 ರನ್ ಗಳಿಸಿತ್ತು. ಈ ಹಂತದಲ್ಲಿ ಮಳೆ ಎಡೆಬಿಡದೆ ಸುರಿಯಲಾರಂಭಿಸಿದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಆದಾಗ್ಯೂ ಮಳೆಯಿಂದಾಗಿ ಪಂದ್ಯ ರದ್ದುಗೊಳ್ಳುವುದಕ್ಕೂ ಮುನ್ನ ಮೈದಾನದಲ್ಲಿ ಸಿಕ್ಸರ್‌ಗಳ ಮಳೆ ಸುರಿಸಲು ಶುರು ಮಾಡಿದ್ದ ನಾಯಕ ಸೂರ್ಯಕುಮಾರ್ ತಮ್ಮ ಖಾತೆಗೆ ವಿಶೇಷ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು.
ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾದರೂ ಟೀಂ ಇಂಡಿಯಾಕ್ಕೆ ಸಮಾಧಾನಕರ ಸುದ್ದಿಯೊಂದು ಸಿಕ್ಕಿದೆ. ಅದೆನೆಂದರೆ ಸತತ ವೈಫಲ್ಯಗಳಿಂದ ಬಳಲುತ್ತಿದ್ದ ನಾಯಕ ಸೂರ್ಯಕುಮಾರ್ ಈ ಪಂದ್ಯದಲ್ಲಿ ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದರು. ಪಂದ್ಯ ನಿಲ್ಲುವುದಕ್ಕೂ ಮುನ್ನ ಸೂರ್ಯ, 24 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 39 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಸೂರ್ಯ 2 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ 150 ಸಿಕ್ಸರ್‌ಗಳನ್ನು ಪೂರೈಸಿದರು.
ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಐದನೇ ಆಟಗಾರ ಎನಿಸಿಕೊಂಡರು. ಹಾಗೆಯೇ ಟಿ20ಐನಲ್ಲಿ 150 ಸಿಕ್ಸರ್‌ಗಳನ್ನು ಬಾರಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು. ಸೂರ್ಯನಿಗೂ ಮೊದಲು ರೋಹಿತ್ ಶರ್ಮಾ ಈ ಮೈಲಿಗಲ್ಲು ದಾಟಿದ್ದರು. ಆದಾಗ್ಯೂ ರೋಹಿತ್ 111 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದರೆ, ಸೂರ್ಯಕುಮಾರ್ ಕೇವಲ 86 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತದ ಪರ ಅತಿ ವೇಗವಾಗಿ 150 ಟಿ20ಐ ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಸೂರ್ಯ ಪಾತ್ರವಾಗಿದೆ. ಟಿ20ಐ ಕ್ರಿಕೆಟ್‌ನಲ್ಲಿ ಅತಿ ವೇಗದ ಟಿ20ಐ ಸಿಕ್ಸರ್‌ಗಳ ದಾಖಲೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೊಹಮ್ಮದ್ ವಾಸಿಮ್ ಹೊಂದಿದ್ದಾರೆ, ಅವರು ಕೇವಲ 66 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ