AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ, ಕೂಡಲೇ ಬಂದು ಅಪಾಯ ತಪ್ಪಿಸಿದ ಪೊಲೀಸ್

Video: ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ, ಕೂಡಲೇ ಬಂದು ಅಪಾಯ ತಪ್ಪಿಸಿದ ಪೊಲೀಸ್

ನಯನಾ ರಾಜೀವ್
|

Updated on:Apr 24, 2026 | 3:00 PM

Share

ಜೈಪುರದ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್​ ಹತ್ತುವಾಗ ಕೈಯಲ್ಲಿದ್ದ ಮಗು ಸಮೇತ ಮಹಿಳೆಯೊಬ್ಬರು ಬೀಳೋಕಾದ ಘಟನೆ ನಡೆದಿದೆ. ಒಂದು ಕೈಯಲ್ಲಿ ಮಗು, ಮತ್ತೊಂದು ಕೈಯಲ್ಲಿ ಬ್ಯಾಗ್ ಇದ್ದುದರಿಂದ ಅವರಿಗೆ ಎಸ್ಕಲೇಟರ್‌ನ ಹ್ಯಾಂಡಲ್ ಹಿಡಿಯಲು ಸಾಧ್ಯವಾಗಲಿಲ್ಲ. ಅವರು ಮಗುವಿನೊಂದಿಗೆ ಹಿಂದಕ್ಕೆ ಬೀಳಲು ಪ್ರಾರಂಭಿಸಿದರು. ಅವರು ಕೆಳಕ್ಕೆ ಬಿದ್ದರೆ ಮಗು ಮತ್ತು ತಾಯಿ ಇಬ್ಬರಿಗೂ ಗಂಭೀರ ಗಾಯಗಳಾಗುವುದು ನಿಶ್ಚಿತವಾಗಿತ್ತು.

ಜೈಪುರ, ಏಪ್ರಿಲ್ 24: ಜೈಪುರದ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್​ ಹತ್ತುವಾಗ ಕೈಯಲ್ಲಿದ್ದ ಮಗು ಸಮೇತ ಮಹಿಳೆಯೊಬ್ಬರು ಬೀಳೋಕಾದ ಘಟನೆ ನಡೆದಿದೆ. ಒಂದು ಕೈಯಲ್ಲಿ ಮಗು, ಮತ್ತೊಂದು ಕೈಯಲ್ಲಿ ಬ್ಯಾಗ್ ಇದ್ದುದರಿಂದ ಅವರಿಗೆ ಎಸ್ಕಲೇಟರ್‌ನ ಹ್ಯಾಂಡಲ್ ಹಿಡಿಯಲು ಸಾಧ್ಯವಾಗಲಿಲ್ಲ. ಅವರು ಮಗುವಿನೊಂದಿಗೆ ಹಿಂದಕ್ಕೆ ಬೀಳಲು ಪ್ರಾರಂಭಿಸಿದರು.

ಅವರು ಕೆಳಕ್ಕೆ ಬಿದ್ದರೆ ಮಗು ಮತ್ತು ತಾಯಿ ಇಬ್ಬರಿಗೂ ಗಂಭೀರ ಗಾಯಗಳಾಗುವುದು ನಿಶ್ಚಿತವಾಗಿತ್ತು. ಕೆಳಗೆ ನಿಂತಿದ್ದ ಪೊಲೀಸ್ ಮಹಿಳೆಯನ್ನು ಕಂಡ ತಕ್ಷಣ, ಒಂದು ಕ್ಷಣವೂ ವ್ಯರ್ಥ ಮಾಡದೆ ಎಸ್ಕಲೇಟರ್ ಕಡೆಗೆ ಓಡಿದರು. ಅವರು ಎಸ್ಕಲೇಟರ್ ಮೇಲೆ ಹತ್ತುವ ಬದಲು, ಮಹಿಳೆ ಕೆಳಕ್ಕೆ ಉರುಳದಂತೆ ತಡೆಯಲು ಕೆಳಗಿನಿಂದಲೇ ಜಿಗಿದು ಆಕೆಯನ್ನು ಭದ್ರವಾಗಿ ಹಿಡಿದರು.

ಅಲ್ಲಿ ನೆರೆದಿದ್ದ ಪ್ರಯಾಣಿಕರು ಕೆಲವು ಸೆಕೆಂಡುಗಳ ಕಾಲ ಉಸಿರು ಬಿಗಿಹಿಡಿದು ನೋಡುತ್ತಿದ್ದರು. ತಕ್ಷಣ ಎಸ್ಕಲೇಟರ್ ಅನ್ನು ನಿಲ್ಲಿಸಿ, ಮಹಿಳೆಯನ್ನು ಸುರಕ್ಷಿತವಾಗಿ ಕೆಳಕ್ಕೆ ಕರೆತರಲಾಯಿತು. ಎಸ್ಕಲೇಟರ್ ಬಳಸುವಾಗ ಸಣ್ಣ ಮಕ್ಕಳನ್ನು ಎತ್ತಿಕೊಂಡಿದ್ದರೆ ಅಥವಾ ಕೈಯಲ್ಲಿ ಹೆಚ್ಚು ಬ್ಯಾಗ್‌ಗಳಿದ್ದರೆ ಹೆಚ್ಚಿನ ಜಾಗರೂಕತೆ ವಹಿಸಿ, ಸಾಧ್ಯವಾದಷ್ಟು ಲಿಫ್ಟ್ ಬಳಸಲು ಆದ್ಯತೆ ನೀಡಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Apr 24, 2026 03:00 PM
Follow Us