ಎರಡಂಕಿ ಮೊತ್ತಕ್ಕೆ ನಮೀಬಿಯ ಆಲೌಟ್: ಭಾರತಕ್ಕೆ ಭರ್ಜರಿ ಜಯ

Updated on: Feb 07, 2026 | 10:02 AM

T20 World Cup 2026: ವಿಶೇಷ ಎಂದರೆ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿರುವ ಎರಡು ತಂಡಗಳ ವಿರುದ್ಧ ಭಾರತ ಎ ತಂಡ ಅಭ್ಯಾಸ ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಭಾರತ ಎ ತಂಡ ಯುಎಸ್​ಎ ವಿರುದ್ಧ 38 ರನ್​ಗಳ ಜಯ ಸಾಧಿಸಿತ್ತು. ಇದೀಗ ನಮೀಬಿಯ ತಂಡವನ್ನು 130 ರನ್​ಗಳಿಂದ ಮಣಿಸಿದೆ.

ಟಿ20 ವಿಶ್ವಕಪ್​ನ 16ನೇ ಅಭ್ಯಾಸ ಪಂದ್ಯದಲ್ಲಿ ನಮೀಬಿಯ ವಿರುದ್ಧ ಭಾರತ ಎ ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಆಯುಷ್ ಬದೋನಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರಿಯಾನ್ ಪರಾಗ್ 39 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 69 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ಎ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿತು.

ಈ ಬೃಹತ್ ಗುರಿಯನ್ನು ಬೆನ್ನತ್ತಿದ ನಮೀಬಿಯ ತಂಡವು 12.1 ಓವರ್​ಗಳಲ್ಲಿ ಕೇವಲ 67 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ಎ ತಂಡ 130 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ವಿಶೇಷ ಎಂದರೆ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿರುವ ಎರಡು ತಂಡಗಳ ವಿರುದ್ಧ ಭಾರತ ಎ ತಂಡ ಅಭ್ಯಾಸ ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಭಾರತ ಎ ತಂಡ ಯುಎಸ್​ಎ ವಿರುದ್ಧ 38 ರನ್​ಗಳ ಜಯ ಸಾಧಿಸಿತ್ತು. ಇದೀಗ ನಮೀಬಿಯ ತಂಡವನ್ನು 130 ರನ್​ಗಳಿಂದ ಮಣಿಸಿದೆ.

ನಮೀಬಿಯ ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಝೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ರುಬೆನ್ ಟ್ರಂಪೆಲ್ಮನ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಲೌರೆನ್ ಸ್ಟೀನ್‌ಕ್ಯಾಂಪ್, ಮಲನ್ ಕ್ರುಗರ್, ನಿಕೋಲ್ ಲಾಫ್ಟಿ-ಈಟನ್, ಜ್ಯಾಕ್ ಬ್ರಾಸ್ಸೆಲ್, ಬೆನ್ ಶಿಕೊಂಗೊ, ಜೆಸಿ ಬಾಲ್ಟ್, ಡೈಲನ್ ಲೀಚರ್, ಡಬ್ಲ್ಯೂಪಿ ಹೀಂಗ್‌ಬರ್ಗ್, ಮ್ಯಾಕ್ಸ್​ ಹಿಯೆಂಗೊ.

ಭಾರತ ಎ ತಂಡ: ಆಯುಷ್ ಬದೋನಿ (ನಾಯಕ), ನಮನ್ ಧೀರ್, ಅಶುತೋಷ್ ಶರ್ಮಾ, ಪ್ರಿಯಾಂಶ್ ಆರ್ಯ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಯಾನ್ ಪರಾಗ್, ಮಾನವ್ ಸುತಾರ್, ಅಶೋಕ್ ಶರ್ಮಾ, ಉರ್ವಿಲ್ ಪಟೇಲ್ (ವಿಕೆಟ್ ಕೀಪರ್), ಗುರ್ಜಪ್ನೀತ್ ಸಿಂಗ್, ವಿಪ್ರಾಜ್ ನಿಗಮ್, ರವಿ ಬಿಷ್ಣೋಯ್, ಖಲೀಲ್ ಅಹ್ಮದ್, ಮಯಾಂಕ್ ಯಾದವ್.